ಅಣ್ವಸ್ತ್ರ ಸಂಗ್ರಹಿಸಲು ಭೂಗತ ಸುರಂಗ ನಿರ್ಮಿಸುತ್ತಿದೆ ‘ಪಾಪಿ’ಸ್ತಾನ್..!

ಈ ಸುದ್ದಿಯನ್ನು ಶೇರ್ ಮಾಡಿ

Pakistan--02

ನವದೆಹಲಿ , ಅ.11- ಪಾಕಿಸ್ತಾನ ಬಳಿ 140 ಅಣ್ವಸ್ತ್ರಗಳಿದ್ದು ಅವುಗಳನ್ನು ಸಂಗ್ರಹಿಸಲು ಅದು ರಾಜಧಾನಿ ದೆಹಲಿ ಬಳಿ ಭೂಗತ ಸುರಂಗವನ್ನು ನಿರ್ಮಿಸುತ್ತಿದೆ ಎಂಬ ಸ್ಪೋಟಕ ಮಾಹಿತಿ ಲಭಿಸಿದೆ.   ಪಂಜಾಬ್‍ನ ಅಮೃತಸರದಿಂದ 350 ಕಿ.ಮೀ. ದೂರದಲ್ಲಿರುವ ಹಾಗೂ ದೆಹಲಿಯಿಂದ 750 ಕಿ.ಮೀ. ಅಂತರದಲ್ಲಿರುವ ಮಿಯಾನ್‍ವಾಲಿ ಬಳಿ ಈ ಸುರಂಗ ನಿರ್ಮಾಣಗೊಳುತ್ತಿದೆ ಎಂದು ವರದಿಯೊಂದು ತಿಳಿಸಿದೆ.  ಈ ಭೂಗತ ಸುರಂಗವು ಮೂರು ಅಂತರ್‍ಸಂಪರ್ಕ ಮಾರ್ಗಗಳನ್ನು ಹೊಂದಿದ್ದು, ತಲಾ 10 ಮೀಟರ್ ಎತ್ತರ ಮತ್ತು 10 ಮೀಟರ್ ಅಗಲವಿದೆ. ಈ ಸುರಂಗಕ್ಕೆ ರಸ್ತೆಗಳ ಮೂಲಕ ತಲುಪಬಹುದಾಗಿದೆ. ಅಲ್ಲಿಂದ ರಹಸ್ಯ ಸ್ಥಳದ ಮೂಲಕ ನಿಖರ ಸ್ಥಳವನ್ನು ಸೇರಬಹುದಾಗಿದೆ. ಈ ಭೂಗತ ಸುರಂಗ ಮಾರ್ಗ ನಿರ್ಮಾಣದ ನಂತರ ಪಾಕಿಸ್ತಾನವು 140 ಅಣ್ವಸ್ತ್ರಗಳನ್ನು ಸಂಗ್ರಹಿಸಲು ಉದ್ದೇಶಿಲಾಗಿದೆ.

ಎಲ್ಲ ಸುರಂಗ ಮಾರ್ಗಗಳಿಗೆ ಪ್ರವೇಶ ಮತ್ತು ನಿರ್ಗಮನ ದ್ವಾರಗಳಿವೆ. ಪ್ರತಿ ಸುರಂಗದಲ್ಲಿ 12 ರಿಂದ 24 ಅಣ್ವಸ್ಥ್ರಗಳನ್ನು ರಹಸ್ಯವಾಗಿ ಸಂಗ್ರಹಿಸಡಬಹುದಾಗಿದೆ. ಪಾಕಿಸ್ತಾನ ಸರಹದ್ದಿನಲ್ಲಿರುವ ಈ ಪ್ರದೇಶಕ್ಕೆ ಅತ್ಯಂತ ಬಿಗಿ ಪಹರೆ ಹಾಕಲಾಗಿದೆ.  ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಗೃಹ ಮತ್ತು ರಕ್ಷಣಾ ಸಚಿವಾಲಯಗಳು ಹೆಚ್ಚಿನ ಮಾಹಿತಿಯನ್ನು ಪಡೆದ ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin