‘ಅತೃಪ್ತ’ ನವಜೋಡಿ

ಈ ಸುದ್ದಿಯನ್ನು ಶೇರ್ ಮಾಡಿ

atrupa-1

ಈ ಹಿಂದೆ ಪ್ರೇಮಾಸುರ ಎಂಬ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಪರಿಚಯವಾಗಿದ್ದ ನಾಗೇಶ್ ಕ್ಯಾಲನೂರು ಇದೀಗ ಅತೃಪ್ತ ಎಂಬ ಮತ್ತೊಂದು ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಮೊನ್ನೆ ಈ ಚಿತ್ರದ ಟೀಸರ್ ಮತ್ತು ಟ್ರೇಲರ್ ಬಿಡುಗಡೆ ಸಮಾರಂಭ ನಡೆಯಿತು. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆದ ಈ ಸಮಾರಂಭದಲ್ಲಿ ಹಾಜರಿದ್ದ ಚಿತ್ರತಂಡ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರದ ವಿಶೇಷತೆಗಳ ಬಗ್ಗೆ ಹೇಳಿಕೊಂಡಿತು. ಮೊದಲು ಮಾತನಾಡಿದ ಚಿತ್ರದ ನಿರ್ದೇಶಕ ನಾಗೇಶ್ ಕ್ಯಾಲನೂರು, ಕೇವಲ 3 ತಿಂಗಳು 17 ದಿನಗಳಲ್ಲಿ ಇಡೀ ಚಿತ್ರವನ್ನು ಕಂಪ್ಲೀಟ್ ಮಾಡಿದ್ದೇವೆ.

ಮದುವೆಯಾದ ನವಜೋಡಿ ಹನಿಮೂನ್‍ಗೆಂದು ವಿಲ್ಲಾ ಒಂದಕ್ಕೆ ಬರುತ್ತಾರೆ. ಅಲ್ಲಿ ಏನೇನು ಅಸಹಜ ಘಟನೆಗಳು ನಡೆಯುತ್ತವೆ. ಅದರ ಹಿಂದಿರುವ ಕಾರಣವೇನು ಎಂಬುದೇ ಅತೃಪ್ತ ಚಿತ್ರದ ಕಥಾಹಂದರ. ಈ ಸಿನಿಮಾದಲ್ಲಿ ಯಾವುದೇ ಹಾಡುಗಳಿಲ್ಲ ಆದರೆ ರೀರೆಕಾರ್ಡಿಂಗ್ ಚಿತ್ರದಲ್ಲಿ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ರೀರೆಕಾರ್ಡಿಂಗ್ ಕೆಲಸಗಳನ್ನು ಜರ್ಮನಿಯಲ್ಲಿ ಮಾಡಲಾಗಿದೆ. ವೈಜ್ಞಾನಿಕ ಮತ್ತು ಧಾರ್ಮಿಕ ನಂಬಿಕೆ ಎರಡನ್ನೂ ಇಟ್ಟುಕೊಂಡು ಸಿನಿಮಾವನ್ನು ಪ್ರೆಸೆಂಟ್ ಮಾಡಿದ್ದೇವೆ ಎಂದರು.

ಚಿತ್ರದ ಬಗ್ಗೆ ಮಾತನಾಡಿದ ನಿರ್ಮಾಪಕ ರಾಘನಾಥ ರಾವ್.ವಿ. ಮೊದಲ ಬಾರಿಗೆ ಸಿನಿಮಾ ಮಾಡಿದ್ದು ಒಳ್ಳೆಯ ಅನುಭವ ನೀಡಿದೆ. ಜನವರಿ ಅಂತ್ಯದೊಳಗೆ ಸಿನಿಮಾವನ್ನು ರಿಲೀಸ್ ಮಾಡುವ ಪ್ಲಾನ್‍ಯಿದೆ ಎಂದು ತಿಳಿಸಿದರು. ಚಿತ್ರದ ನಾಯಕ ನಟ ಅರ್ಜುನ್ ಯೋಗಿ, ನಾಯಕಿ ಕೃತಿ ಕೂಡ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅತೃಪ್ತ ಚಿತ್ರದಲ್ಲಿ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಮುನಿ ಮೊದಲಾದ ಕಲಾವಿದರು ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರವಿಕಿಶೋರ್ ಛಾಯಾಗ್ರಹಣ ಚಿತ್ರಕ್ಕೆ ಕಣ್ಣನ್ ಸಿ.ಜಿ. (ಕಂಪ್ಯೂಟರ್ ಗ್ರಾಫಿಕ್ಸ್), ಮುರುಗೇಶನ್ ಡಿಐ, ಶೇಖರ್ ಸೌಂಡ್ ಎಫೆಕ್ಟ್ ಕೆಲಸವನ್ನು ಮಾಡಿದ್ದಾರೆ. ಜೈತ್ರಾಶ್ರೀ ಪಿಕ್ಚರ್ಸ್ ಬ್ಯಾನರ್‍ನಡಿ ಈ ಚಿತ್ರ ನಿರ್ಮಾಣವಾಗಿದೆ.

Facebook Comments

Sri Raghav

Admin