ಅತ್ತಿಗೆ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಮೈದುನ..!

ಈ ಸುದ್ದಿಯನ್ನು ಶೇರ್ ಮಾಡಿ

Rape--01

ಚಿತ್ರದುರ್ಗ, ಅ.8-ತನ್ನ ಅಣ್ಣನ ಹೆಂಡತಿಯ ಮೇಲೆ ಅತ್ಯಾಚಾರವೆಸಗಿದ ಮೈದುನ ಆಕೆಯನ್ನು ಕೊಲೆ ಮಾಡಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲ್ಲೂಕು ಹಾಲುಮಾದೇನಹಳ್ಳಿಯಲ್ಲಿ ನಡೆದಿದೆ.  ಮಧ್ಯರಾತ್ರಿ ತನ್ನ ಅತ್ತಿಗೆ ಮಂಜುಳಾ(28)ಳ ಮೇಲೆ ಅತ್ಯಾಚಾರ ನಡೆಸಿದ ಸಿದ್ಧಾಭೋವಿ ಎಂಬ ದುಷ್ಕರ್ಮಿ ನಂತರ ಆಕೆಯನ್ನು ಕೊಲೆ ಮಾಡಿ ಸಮೀಪದ ಹುಳಿವಿನಾಳ ಬಳಿ ಎಸೆದು ಬಂದಿದ್ದಾನೆ.  ಹಿರಿಯೂರು ಗ್ರಾಮಾಂತರ ಪೊಲೀಸರು ಈಗಾಗಲೇ ಆರೋಪಿಯನ್ನು ಬಂಧಿಸಿದ್ದು , ತನಿಖೆ ನಡೆಸುತ್ತಿದ್ದಾರೆ.

ಹಾಲುಮಾದೇನಹಳ್ಳಿ ಯರ್ರಾಭೋವಿ ಕಳೆದ ಮೂರು ವರ್ಷಗಳ ಹಿಂದೆ ಮಂಜುಳಾಳನ್ನು ವಿವಾಹವಾಗಿದ್ದ. ರಾತ್ರಿ ಯಾರೂ ಮನೆಯಲ್ಲಿ ಇಲ್ಲದಾಗ ಯರ್ರಾಭೋವಿ ತಮ್ಮ ಸಿದ್ಧಾಭೋವಿ ತನ್ನ ಅತ್ತಿಗೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದನ್ನು ಪ್ರತಿರೋಧಿಸಿದ ಅತ್ತಿಗೆ ಬದುಕಿದ್ದರೆ ತನ್ನ ಕೃತ್ಯ ಬಹಿರಂಗವಾಗುತ್ತದೆ ಎಂದು ಭಾವಿಸಿದ ಸಿದ್ದಾಭೋವಿ ಆಕೆಯನ್ನು ಕತ್ತು ಹಿಸುಕಿ ಹತ್ಯೆ ಮಾಡಿ ಸಮೀಪದ ಹುಳಿವಿನಾಳ ಬಳಿ ಎಸೆದು ಬಂದಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಅನುಮಾನಗೊಂಡು ಸಿದ್ದಾಭೋವಿಯನ್ನು ವಶಕ್ಕೆ ಪಡೆದು ತನಿಖೆಗೊಳಪಡಿಸಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.

Facebook Comments

Sri Raghav

Admin