ಅತ್ತಿಬೆಲೆ ಸಮೀಪ ಹೊತ್ತಿ ಉತ್ತಿದ ಕೆಮಿಕಲ್ ತುಂಬಿದ್ದ ಕಂಟೈನರ್, ಚಾಲಕ-ಕ್ಲೀನರ್ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Attibele--01

ಆನೇಕಲ್, ಏ.13- ಅತ್ತಿಬೆಲೆ ಸಮೀಪದ ಚೆಕ್ ಪೋಸ್ಟ್ಸ್ಟ್ ಬಳಿ ನಿಲ್ಲಿಸಿದ್ದ ಕಂಟೈನರ್ ಗೆ ಕೆಮಿಕಲ್ ತುಂಬಿದ ಲಾರಿಯೊಂದು ಡಿಕ್ಕಿಹೊಡೆದ ಪರಿಣಾಮವಾಗಿ ಬೆಂಕಿ ಹೊತ್ತಿಕೊಂಡು ಲಾರಿಯಲ್ಲಿದ್ದ ಚಾಲಕ ಮತ್ತು ಕ್ಲೀನರ್ ಸ್ಥಳದಲ್ಲಿಯೇ ಸಜೀವ ದಹನವಾಗಿರುವ ಘಟನೆ ತಡರಾತ್ರಿ ನಡೆದಿದೆ. ಮಹಾರಾಷ್ಟ್ರದ ತಂಜಾವೂರಿನ ವೇಲು ಮುರುಗನ್(24) ಹಾಗೂ ಕ್ಲೀನರ್ ಮೃತಪಟ್ಟಿದ್ದು, ಈತನ ಹೆಸರು ತಿಳಿದುಬಂದಿಲ್ಲ.  ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆ ಚೆಕ್‍ ಪೋಸ್ಟ್ ಬಳಿಯ ರಸ್ತೆ ಬದಿ ತಡರಾತ್ರಿ ಕಂಟೈನರ್ ನಿಲ್ಲಿಸಲಾಗಿತ್ತು.

ಈ ವೇಳೆ ಈ ವಾಹನ ನಿಂತಿರುವುದು ಲಾರಿ ಚಾಲಕನ ಗಮನಕ್ಕೆ ಬಾರದೆ ಅತಿ ವೇಗವಾಗಿ ಚಾಲನೆ ಮಾಡಿಕೊಂಡು ಕಂಟೈನರ್‍ಗೆ ಡಿಕ್ಕಿ ಹೊಡೆದ ರಭಸಕ್ಕೆ ಲಾರಿಯಲ್ಲಿದ್ದ ಕೆಮಿಕಲ್‍ಗೆ ಬೆಂಕಿ ತಗುಲಿ ಲಾರಿಯನ್ನು ಆವರಿಸಿದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಇಬ್ಬರು ಸಜೀವ ದಹನವಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಅತ್ತಿಬೆಲೆ ಪೊಲಿಸರು ತನಿಖೆ ಕೈಗೊಂಡಿದ್ದಾರೆ.

Facebook Comments

Sri Raghav

Admin