ಅತ್ತ ಕದನ ವಿರಾಮ, ಇತ್ತ 22 ಮಂದಿ ಮಾರಣಹೋಮ

ಈ ಸುದ್ದಿಯನ್ನು ಶೇರ್ ಮಾಡಿ

22-Killed

ಡಮಾಸ್ಕಸ್, ಡಿ.22-ಟರ್ಕಿ ಮತ್ತು ರಷ್ಯಾ ಮಧ್ಯಸ್ಥಿಕೆಯಲ್ಲಿ ಸಿರಿಯಾ ದೇಶಾದ್ಯಂತ ಕದನವಿರಾಮ ಜಾರಿಗೆ ಬರುವುದಕ್ಕೆ ಕೆಲವು ಗಂಟೆಗಳ ಮೊದಲು ರಾಜಧಾನಿ ಡಮಾಸ್ಕಸ್‍ನಲ್ಲಿ ಸರ್ಕಾರಿ ಪಡೆಗಳು ನಡೆಸಿದ ಬಾಂಬ್ ದಾಳಿಯಲ್ಲಿ 14 ಮಕ್ಕಳೂ ಸೇರಿದಂತೆ 22 ಮಂದಿ ಬಲಿಯಾಗಿದ್ದಾರೆ. ರಾಜಧಾನಿ ಡಮಾಸ್ಕಸ್ ಹೊರವಲಯದ ಡೌಮಾ ಮತ್ತು ಘೆಟಾ ಪ್ರದೇಶಗಳಲ್ಲಿ ಸಿರಿಯಾ ಸರ್ಕಾರಿ ಪಡೆಗಳು ವಿಮಾನಗಳ ಮೂಲಕ ಬಾಂಬ್ ಮತ್ತು ಷೆಲ್ ದಾಳಿಗಳನ್ನು ತೀವ್ರಗೊಳಿಸಿದರು. ಈ ಆಕ್ರಮಣದಿಂದ ಮಕ್ಕಳು ಮತ್ತು ಮಹಿಳೆಯರೂ ಸೇರಿದಂತೆ 22ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ಉಸ್ತುವಾರಿ ವೀಕ್ಷಣಾಲಯ ತಿಳಿಸಿದೆ.

ಕದನ ವಿರಾಮ ಜಾರಿ :  ಇದೇ ವೇಳೆ, ಟರ್ಕಿ ಮತ್ತು ರಷ್ಯಾ ಮಧ್ಯಸ್ಥಿಕೆಯಲ್ಲಿ ಯುದ್ಧ ವಿರಾಮ ಜಾರಿಗೆ ಬಂದಿದ್ದು, ಆರು ವರ್ಷಗಳ ರಕ್ತಪಾತದ ಬಿಕ್ಕಟ್ಟು ಅಂತ್ಯಗೊಂಡಿದೆ.

ಯುದ್ಧ ಅಪರಾಧ ತನಿಖೆ ಚುರುಕು :   ಸಮರ ಸಂತ್ರಸ್ತ ಸಿರಿಯಾದಲ್ಲಿ ಯುದ್ದ ಅಪರಾಧ ಪ್ರಕರಣಗಳ ಕುರಿತು ಸಾಕ್ಷ್ಯಾಧಾರ ಸಂಗ್ರಹಿಸಲು ಸಮಿತಿಯೊಂದನ್ನು ರಚಿಸುವುದಕ್ಕೆ ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನ ಸಮ್ಮತಿ ಸೂಚಿಸಿದೆ. ಆರು ವರ್ಷಗಳ ಅವಧಿಯಲ್ಲಿ ಅಮಾಯಕರ ಮೇಲೆ ದೌರ್ಜನ್ಯಕ್ಕೆ ಕಾರಣರಾದವರನ್ನು ಶಿಕ್ಷೆಗೆ ಗುರಿಪಡಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಕಳೆದ ಆರು ವರ್ಷಗಳ ಅವಧಿಯಲ್ಲಿ ನಡೆಸಿದ ದೌರ್ಜನ್ಯದಿಂದ 3,10,000 ಮಂದಿ ಹತರಾಗಿದ್ದಾರೆ ಎಂದು ಹಲವಾರು ವರದಿಗಳು ಸಲ್ಲಿಕೆಯಾಗಿದ್ದವು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin