ಅತ್ಯಲ್ಪ ಕಾಲ ಆಡಳಿತ ನಡೆಸಿದ ಮುಖ್ಯಮಂತ್ರಿಗಳು ಇವರು

ಈ ಸುದ್ದಿಯನ್ನು ಶೇರ್ ಮಾಡಿ

CM--01
ಬೆಂಗಳೂರು, ಮೇ 20-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೂರು ದಿನದ ಅವಧಿಯಲ್ಲಿ ಕಡಿಮೆ ಅವಧಿ ಮುಖ್ಯಮಂತ್ರಿ ಎನಿಸಿದರೆ, ಅದೇ ರೀತಿ ದೇಶದಲ್ಲಿ ಅತಿ ಕಡಿಮೆ ಆಡಳಿತ ನಡೆಸಿದ ಮುಖ್ಯಮಂತ್ರಿಗಳೆಂದರೆ ಉತ್ತರ ಪ್ರದೇಶದ ಜಗದಾಂಬಿಕಾ ಪಾಲ್ ಅವರೂ ಕೂಡ ಮೂರು ದಿನಗಳಷ್ಟೇ ಮುಖ್ಯಮಂತ್ರಿಗಳಾಗಿದ್ದರು. 1998ರ ಫೆ.22 ರಂದು ಅಧಿಕಾರ ಸ್ವೀಕರಿಸಿದ್ದ ಅವರು 23ಕ್ಕೆ ರಾಜೀನಾಮೆ ನೀಡಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ 2018, ಮೇ 17 ರಂದು ಪ್ರಮಾಣವಚನ ಸ್ವೀಕಾರ ಮಾಡಿ ಮೇ 19ಕ್ಕೆ ರಾಜೀನಾಮೆ ನೀಡಿದ್ದರು.

ಬಿಹಾರದ ಸತೀಶ್ ಪ್ರಸಾದ್‍ಸಿಂಗ್ 1968ರಲ್ಲಿ ಜ.28 ರಿಂದ ಫೆ.1ರವರೆಗೆ ಕೇವಲ ಐದು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಓಂಪ್ರಕಾಶ್ ಚೌತಾಲಾ 1990ರ ಜು.12 ರಿಂದ 17ರವರೆಗೆ ಆರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ನಿತೀಶ್‍ಕುಮಾರ್ ಅವರು 2000ರಲ್ಲಿ ಮಾ.3 ರಿಂದ ಮಾ10ರವರೆಗೆ ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದರೆ, ಬಿ.ಎಸ್.ಯಡಿಯೂರಪ್ಪ 2007ರ ನ.12 ರಿಂದ ನ.19ರವರೆಗೆ ಮೊದಲ ಬಾರಿಗೆ ಎಂಟು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.

ಮೇಘಾಲಯದಲ್ಲಿ ಎಸ್.ಸಿ.ಮಾರಕ್ ಅವರು 1998ರ ಫೆ.27ರಿಂದ ಮಾ.10ರವರೆಗೆ 12 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. 1991ರಲ್ಲಿ ಓಂಪ್ರಕಾಶ್ ಚೌತಾಲಾ ಅವರು ಹರಿಯಾಣದಲ್ಲಿ ಮಾ.21ರಿಂದ ಏ.6ರವರೆಗೆ ಆರು ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ತಮಿಳುನಾಡಿನಲ್ಲಿ ಜಾನಕಿರಾಮಚಂದ್ರನ್ ಅವರು 1998ರಲ್ಲಿ ಜ.7 ರಿಂದ ಜ.30ರವರೆಗೆ 24 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರೆ, ಬಿಹಾರದ ಬಿಂದೇಶ್ವರ್ ಪ್ರಸಾದ್ ಮಂಡಲ್ ಅವರು 1968ರಲ್ಲಿ ಫೆ.1 ರಿಂದ ಮಾ.2 ರವರೆಗೆ 31 ದಿನಗಳ ಕಾಲ ಮುಖ್ಯಮಂತ್ರಿ ಪದವಿಯಲ್ಲಿದ್ದರು. ಅದೇ ರೀತಿ ಬಿಹಾರದ ಸಿ.ಎಚ್.ಮಹಮ್ಮದ್ ಕೊಯಾ ಅವರು 1979ರ ಅಕ್ಟೋಬರ್ 12 ರಿಂದ ಡಿ.1ರವರೆಗೆ 51 ದಿನಗಳ ಕಾಲ ಮಾತ್ರ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ದರು.

Facebook Comments

Sri Raghav

Admin