ಅತ್ಯಾಚಾರಿಗಳಿಗೆ 11 ವರ್ಷ ಜೈಲು

ಈ ಸುದ್ದಿಯನ್ನು ಶೇರ್ ಮಾಡಿ

jail

ದಾವಣಗೆರೆ, ಏ.27- ಸಾಮೂಹಿಕ ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 4 ಯುವಕರಿಗೆ 11 ವರ್ಷ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಇಲ್ಲಿನ 2ನೇ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.ರಾಘವೇಂದ್ರ, ದೇವರಾಜು, ರಘು, ಸಂತೋಷ್ ಜೈಲು ಶಿಕ್ಷೆಗೆ ಒಳಗಾದವರು.

ಹಿನ್ನೆಲೆ:

ಡಿಸೆಂಬರ್ 17, 2012ರ ರಾತ್ರಿ 8 ಗಂಟೆಯಲ್ಲಿ ಸರೋಜ( ಹೆಸರು ಬದಲಾಗಿದೆ) ಎಂಬ ಯುವತಿಯನ್ನು ರಾಘವೇಂದ್ರ, ದೇವರಾಜು ಜತೆ ಸೇರಿ ತನ್ನ ಆಟೋದಲ್ಲಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದಾರೆ. ರಘು, ಸಂತೋಷ್ ಹಿಂಬಾಲಿಸಿ ಹೋಗಿದ್ದರು. ಜನ ವಸತಿ ಇರದ ಜಾಗಕ್ಕೆ ಯುವತಿಯನ್ನು ಕರೆದೊಯ್ದುಸಾಮೂಹಿಕ ಅತ್ಯಾಚಾರ ನಡೆಸಿದ್ದರು.  ಈ ಸಂಬಂಧ ನಗರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಾಕ್ಷಿ, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಯುವತಿ ಅಪಹರಣ ಮಾಡಿದ್ದಕ್ಕೆ 5 ವರ್ಷ, 5ಸಾವಿರ ದಂಡ, ಅತ್ಯಾಚಾರ ಪ್ರಕರಣಕ್ಕೆ 6 ವರ್ಷ, 10 ಸಾವಿರ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.ಆರೋಪಿಗಳು ಒಟ್ಟು 11 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಿದ್ದು, ದಂಡ ಕಟ್ಟಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 1 ವರ್ಷ 6 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದದು, ದಂಡದ ಹಣದಲ್ಲಿ ಸಂತ್ರಸ್ತ ಯುವತಿಗೆ 50ಸಾವಿರ ಪರಿಹಾರ ನೀಡುವಂತೆ ತಿಳಿಸಿದೆ.ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ, ಎಸ್.ಎಸ್.ಕುದರಿ ವಾದ ಮಂಡಿಸಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin