ಅತ್ಯಾಚಾರ ಪ್ರಕರಣ : ರಾಜ್ಯಸಭೆಯಲ್ಲಿ ಕಾಂಗ್ರೆಸ್-ಎಸ್‍ಪಿ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

adgsdgsdgsgನವದೆಹಲಿ, ಆ.3-  ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳು ವಿಶೇಷವಾಗಿ ಬುಲಂದ್‍ಶಹರ್‍ನ ತಾಯಿ ಮತ್ತು ಅಪ್ರಾಪ್ತ ಮಗಳ ಮೇಲಿನ ಸಾಮೂಹಿಕ ಅತ್ಯಾಚಾರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ (ಎಸ್‍ಪಿ) ಸದಸ್ಯರ ನಡುವೆ ಇಂದು ರಾಜ್ಯಸಭೆಯಲ್ಲಿ  ಭಾರೀ ಬಿಸಿಬಿಸಿ ಮಾತಿನ ಚಕಮಕಿ ನಡೆಯಿತು. ಆದರೆ, ಈ ಮಧ್ಯೆ ಕಾನೂನು ಸುವ್ಯವಸ್ಥೆಗಳು ಆಯಾ ರಾಜ್ಯಕ್ಕೆ ಬಿಟ್ಟು ವಿಷಯ ಎಂದು ಸರ್ಕಾರ ಹೇಳಿತುಬುಲಂದ್‍ಶಹರ್‍ನ ಇತ್ತೀಚಿನ ತಾಯಿ-ಮಗಳ ಮೇಲಿನ ಅತ್ಯಾಚಾರ, ಮಹಿಳೆಯರ ಮೇಲಿನ ದೌರ್ಜನ್ಯ ಕುರಿತಂತೆ ಕಾಂಗ್ರೆಸ್‍ನ ರಜನಿ ಪಾಟೀಲ್ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ಈ ಬಗ್ಗೆ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂದು ಆಗ್ರಹಿಸಿದರು.ಈ ಸಂದರ್ಭ ಈ ಹೇಳಿಕೆಯನ್ನು ಖಂಡಿಸಿದ ಸಮಾಜವಾದಿ ಪಕ್ಷದ ಸಂಸದೆ ಜಯಬಾಧುರಿ ಅವರು, ಮಹಿಳೆಯರ ಮೇಲಿನ ಅತ್ಯಾಚಾರ, ದೌರ್ಜನ್ಯಗಳ ಕುರಿತಂತೆ ನೀವು (ಕಾಂಗ್ರೆಸಿಗರು) ಮೊಸಳೆ ಕಣ್ಣೀರು ಹಾಕುವುದು ಬೇಡ ಎಂದು  ಹೇಳಿದರು. ಅಲ್ಲದೆ, ಇಂತಹ ವಿಷಯ ರಾಜಕೀಯ ಮಾಡಬೇಡಿ ಎಂದು ತಿಳಿಸಿದರು. ಆಗ ಎರಡೂ ಪಕ್ಷಗಳ ಸದಸ್ಯರ ನಡುವೆ ವಾಗ್ವಾದಗಳು ನಡೆದವು.ದೇಶದ ಎಲ್ಲ ಕಡೆ ಇಂತಹ ಅಹಿತಕರ ಘಟನೆಗಳು ನಡೆಯುತ್ತಲೇ ಇವೆ. ಆದ್ದರಿಂದ ಉತ್ತರ ಪ್ರದೇಶ ವೊಂದನ್ನೇ ಟಾರ್ಗೆಟ್ ಮಾಡುವುದು ಬೇಡ ಎಂದು ಬಾಧುರಿ ತಿಳಿಸಿದರು.ಇಂತಹ ಅಮಾನವೀಯ ಘಟನೆಗಳು ಯಾವ ರಾಜ್ಯದಲ್ಲಿ ನಡೆದರೂ ಒಂದೇ ಎಂದು ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದರು.

► Follow us on –  Facebook / Twitter  / Google+

 ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin