ಅತ್ಯಾಚಾರ – ಸುಲಿಗೆ : ಮಹಿಳೆ ಸೇರಿ ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

belagam-000
ಗದಗ,ಸೆ.2- ನಗರದ ಹೊರವಲಯದಲ್ಲಿ ಒಂಟಿ ಅಮಾಯಕ ಹೆಣ್ಣು ಮಕ್ಕಳನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿ ಅವರ ಹತ್ತಿರವಿರುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದ ಆರೋಪಿ ಮತ್ತು ಅವನಿಗೆ ಸಹಕರಿಸುತ್ತಿದ್ದ ಮಹಿಳೆ ಮತ್ತು ಪುರುಷನನ್ನು ಬಂ„ಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷಬಾಬು ಕೆ. ಹೇಳಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು. ಆರೋಪಿಯಿಂದ 2 ಮೋಟರ್ ಬೈಕ್, 630 ಗ್ರಾಂ ಬಂಗಾರದ ಆಭರಣಗಳು ಹಾಗೂ 61 ಗ್ರಾಂ ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳ ಲಾಗಿದ್ದು ಆರೋಪಿಗಳ ವಿರುದ್ದ ಅತ್ಯಾಚಾರ, ಸುಲಿಗೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ 7 ಪ್ರಕರಣಗಳನ್ನು ದಾಖಲಾಗಿದ್ದು ರಾಜ್ಯಾಧ್ಯಂತ  ವಿವಿಧ ಜಿಲ್ಲೆಗಳಲ್ಲಿ ಇವನ ಕೃತ್ಯ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಇನ್ನೂ ಹಲವಾರು ಪ್ರಕರಣಗಳು ಬಯಲಿಗೆ ಬರುವ ಸಾದ್ಯತೆ ಇದೇ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷಬಾಬು ಕೆ. ಹೇಳಿದರು.

ಆರೋಪಿಗಳು ಮೂಲತಃ ಹಾವೇರಿ ಜಿಲ್ಲೆಯ ಸವಣೂರ ತಾಲ್ಲೂಕಿನ ಕಲಿವಾಳ ಗ್ರಾಮದವನಾದ ಪ್ರಮುಖ ಆರೋಪಿ ಫಕ್ಕೀರಪ್ಪ ಶಂಕ್ರಪ್ಪ ಕಾಡಣ್ಣವರ ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳ ಹೊರವಲಯದ ದಾರಿಯಲ್ಲಿ ಸಿಗುವ ಅಮಾಯಕ ಹೆಣ್ಣುಮಕ್ಕಳಿಗೆ ನಾನೊಬ್ಬ ಪೊಲೀಸ್, ಡಾಕ್ಟರ್, ಸರಕಾರಿ ನೌಕರ ನಿಮಗೆ ಪರಿಚಯದವನು ನಿಮ್ಮನ್ನು ಈಗಾಗಲೇ ನೋಡಿದ್ದೆನೆ ಎಂದು ನಂಬಿಸಿ ಅವರನ್ನು ಡ್ರಾಪ್ ಮಾಡುವ ನೆಪದಲ್ಲಿ ಬೈಕ್ ಮೇಲೆ ಹತ್ತಿಸಿಕೊಂಡು ಹೋಗಿ ಸ್ವಲ್ಪ ದೂರ ಹೋದ ನಂತರ ನಿರ್ಜನ ಪ್ರದೇಶದಲ್ಲಿ ಅವರ ಮೇಲೆ ಅತ್ಯಾಚಾರ ವೆಸಗಿ, ಅವರಲ್ಲಿದ್ದ ಆಭರಣಗಳನ್ನು ಕಿತ್ತುಕೊಂಡು ಹೋಗುತ್ತಿದ್ದನು. ಇವನ ಕೃತ್ಯಗಳಿಗೆ ಇವನ ಉರಿನವನಾದ ಬಸವರಾಜ ಗದಿಗೆಪ್ಪ ಗೆದಿಗೆಣ್ಣವರ ಹಾಗೂ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ರಾಮೇನಹಳ್ಳಿ ಗ್ರಾಮದ ಮಹಾದೇವಿ ಶರಣಪ್ಪ ಬೇವಿನಮರದ ಎಂಬವರು ಮಹಿಳೆಯರ ಮೋಬೈಲ್ ನಂಬರ್‍ಗಳನ್ನು ಆರೋಪಿ ಫಕ್ಕಿರಪ್ಪನಿಗೆ ನೀಡಿ ಸಹಕರಿಸುತ್ತಿದ್ದರು.

ಈಗಾಗಲೇ ಆರೋಪಿಯಿಂದ 31 ಮೂಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಅವರದೇ ಮೋಬೈಲ್‍ಗಳನ್ನು ಇಂತಹ ಕೃತ್ಯಗಳಿಗೆ ಬಳಸುತ್ತಿದ್ದನು ಎಂದು ಎಸ್‍ಪಿ ಸಂತೋಷಬಾಬು ಹೇಳಿದರು. ಈಗಾಗಲೇ ಜಿಲ್ಲೆಯಲ್ಲಿ 5 ಪ್ರಕರಣ ಹಾಗೂ ಹಾವೇರಿ ಜಿಲ್ಲೆಯಲ್ಲಿ 2 ಪ್ರಕರಣಗಳು ದಾಖಲಿಸಲಾಗಿದೆ. ಆರೋಪಿಯು 14 ಅತ್ಯಾಚಾರಗಳನ್ನು ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದು ಅವುಗಳನ್ನು ಎಲ್ಲಿ ಮಾಡಿದ್ದೇನೆ ಎಂದು ನೆನಪಿನಲ್ಲಿ ಇಲ್ಲ ಎಂದು ಹೇಳುತ್ತಿದ್ದಾನೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಎಸ್‍ಪಿ ಸಂತೋಷಬಾಬು ಹೇಳಿದರು.

ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ಬೇಧಿಸಿದ ಡಿವೈಎಸ್‍ಪಿ ವಿಜಯಕುಮಾರ ವಿ.ಟಿ., ಗ್ರಾಮೀಣ ಸಿಪಿಐ ಎಸ್.ಜಿ. ಜುಟ್ಟಲ ಗ್ರಾಮೀಣ ಪಿಎಸ್‍ಐ ಎಲ್.ಕೆ. ಜೂಲಕಟ್ಟಿ, ಸಿಬ್ಬಂದಿಗಳಾದ ನಿಸಾರಅಹ್ಮದ ಮಲ್ವಿ, ಬಸವರಾಜ ಗುಡ್ಲಾನೂರ, ರುದ್ರಗೌಡ ಪಾಟೀಲ, ಪ್ರಸನ್ನ ರಂಗ್ರೇಜಿ, ಕರಿಯಪ್ಪ ಸಂಕದಾಳ, ಮಾಲತಿ ಶೀಗಿಹಳ್ಳಿ, ಗುರುರಾಜ ಬೂದಿಹಾಳ, ಶಂಕರಲಿಂಗ ಮಾವಿನಕಾಯಿ,ಮಹೇಶ ಡಂಬಳ, ಸಯ್ಯದ ಕಲಾದಗಿ ಅವರಿಗೆ ಬಹುಮಾನ ನೀಡಲಾಗುವುದು ಎಂದು ಎಸ್ಪಿ ಸಂತೋಷಬಾಬು ಕೆ ಹೇಳಿದರು.

 

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin