ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದ ರೆಡ್ಡಿಗೆ ಸಂಕಷ್ಟ ಶುರು

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy

ಬೆಂಗಳೂರು,ಡಿ.9- ದೇಶವೇ ತನ್ನತ್ತ ತಿರುಗಿ ನೋಡುವಂತೆ ತನ್ನ ಮಗಳ ಮದುವೆ ಮಾಡಿದ ರೆಡ್ಡಿಗೆ ಸಂಕಷ್ಟ ಶುರುವಾಗಿದೆ. ನೂರು ಕೋಟಿ ಕಪ್ಪು ಹಣವನ್ನು ಬಿಳಿ ಮಾಡಿದ ಆರೋಪ ಗಣಿಧಣಿ ಮೇಲಿದೆ. ಅಷ್ಟಕ್ಕೂ ಡೆತ್ ನೋಟಿನಲ್ಲಿ ಆರೋಪಿಸಿರುವ ಭ್ರಷ್ಟ ಏಂS ಅಧಿಕಾರಿ ಭೀಮಾನಾಯ್ಕ್ ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಎಂಥಾ ನಂಟಿತ್ತು?  ಜನಾರ್ದನ ರೆಡ್ಡಿ ಹಾಗೂ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಗೂ ಒಳ್ಳೆಯ ಸಂಬಂಧವಿತ್ತು ಎನ್ನುವುದು ಸಾಬೀತಾಗಿದೆ. ಏಳು ವರ್ಷದ ಹಿಂದೆ ಬಿಜೆಪಿ ಸರ್ಕಾರದಲ್ಲಿ ಜನಾರ್ದನ ರೆಡ್ಡಿ ಸಚಿವರಾಗಿದ್ದರು. ಈ ಸಮಯದಲ್ಲಿ ಭೀಮಾನಾಯ್ಕ್ ಬಳ್ಳಾರಿಯ ತಹಸೀಲ್ದಾರ್ ಆಗಿದ್ದರು. ಗಣಿ ಧಣಿ ರೆಡ್ಡಿ ಬಂಟನಾಗಿ, ಆಪ್ತನಾಗಿ ಕಾರ್ವನಿರ್ವಹಿಸುತ್ತಿದ್ದರು.

ಚಾಗನೂರು ವಿಮಾನ ನಿಲ್ದಾಣ ವಿರೋಧಿಸಿ ರೈತ್ರು ಹೋರಾಟ ನಡೆಸುತ್ತಿದ್ದರು. 2009 ಫೆಬ್ರವರಿ 15ರಂದು ಗೋಡೆಹಾಳ್ ಕ್ರಾಸ್ ನಲ್ಲಿ ಹೆದ್ದಾರಿ ತಡೆದ ರೈತರ ಮೇಲೆ ಲಾಠಿ ಪ್ರಹಾರಕ್ಕೆ ಆದೇಶಿಸಿದ್ದು ಇದೇ ಅಧಿಕಾರಿ ಭೀಮಾನಾಯ್ಕ್ ಈ ಕೆಎಎಸ್ ಅಧಿಕಾರಿಯ ಹುಟ್ಟೂರು ಬಳ್ಳಾರಿಯ ಮರಿಯಮ್ಮನಹಳ್ಳಿ ತಾಂಡ. ಇಲ್ಲಿ ಭೀಮಾನಾಯ್ಕ್ ಸ್ವಂತ ಮನೆಯಿದೆ. ಇವರ ಬಹುತೇಕ ಸ್ಥಿರಾಸ್ತಿ ಸಹೋದರಿ ಗಂಡನ ಹೆಸರಲ್ಲಿದೆ. ರೆಡ್ಡಿ ಮಗಳ ಮದುವೆಗಾಗಿ ಬ್ಲಾಕ್ ಅಂಡ್ ವೈಟ್ ಸಂಬಂಧ ಸಿಬಿಐ ತನಿಖೆ ಆಗ್ಬೇಕು. ಸಂಸದ ಶ್ರೀರಾಮುಲು ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಅಂತ ಗಣಿ ಉದ್ಯಮಿ ಆಮ್ ಆದ್ಮಿ ಪಕ್ಷದ ಮುಖಂಡ ಟಪಾಲ್ ಗಣೇಶ್ ಒತ್ತಾಯಿಸಿದ್ದಾರೆ.

ಕಳೆದ ವರ್ಷ ಇದೇ ಭೀಮಾನಾಯ್ಕï ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದರು. ಒಟ್ನಲ್ಲಿ ಜನಾರ್ದನರೆಡ್ಡಿ ಹಾಗೂ ಬಳ್ಳಾರಿ ಸಂಸದ ಶ್ರೀರಾಮುಲು ಜೊತೆಗಿನ ಕೆಎಎಸ್ ಅಧಿಕಾರಿ ಭೀಮಾನಾಯ್ಕ್ ಗೆಳೆತನಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ಅದೇ ರೀತಿ ಅಕ್ರಮದ ಹೊಳಹುಗಳೂ ಬಿಚ್ಚಿಕೊಳ್ಳುತ್ತಿವೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin