ಅದ್ದೂರಿಯಾಗಿ ಮಗಳ ಮದುವೆ ಮಾಡಿದ್ದ ರೆಡ್ಡಿಗೆ ಐಟಿ ಶಾಕ್..!

ಈ ಸುದ್ದಿಯನ್ನು ಶೇರ್ ಮಾಡಿ

Janardhan-reddy

ಬಳ್ಳಾರಿ ,ನ.21 – ಅರಮನೆ ಮೈದಾನದಲ್ಲಿ ನೂರಾರು ಕೋಟಿ ವೆಚ್ಚ ಮಾಡಿ ತನ್ನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬಳ್ಳಾರಿ ಓಬಳಾಪುರಂ ಮೈನಿಂಗ್ ಕಂಪನಿ,(ಓ ಎಂ. ಸಿ) ಅಸ್ಸೋಸೆಟ್ಟ್ ಮೈನಿಂಗ್ ಕಂಪನಿ (ಎ. ಎಂ. ಸಿ) ಹಾಗು ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್ ನೀಡಿದ್ದಾರೆ.ಕಳೆದ ಎರಡು ದಿನಗಳ ಹಿಂದಷ್ಟೇ ಅರಮನೆ ಮೈದಾನದಲ್ಲಿ ದೇಶದ ಜನರ ಕಣ್ಣು ಕುಕ್ಕುವ ರೀತಿ ತನ್ನ ಮಗಳ ಮದುವೆಯನ್ನ ಅತ್ಯಂತ ವೈಭವವಾಗಿ ನೆರವೇರಿಸಿದ್ದ ರೆಡ್ಡಿ ಮಗಳ ಮಾಡುವೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಲೋಕ ಸಭೆ ರಾಜ್ಯ ಸಭೆಯಲ್ಲಿ ಈ ವಿಷಯ ಪ್ರತಿ ದ್ವನಿಸಿತ್ತು ತನಿಖೆಗೆ ಆಗ್ರಹಿಸಿ ಪ್ರತಿ ಪಕ್ಷಗಳು ಪಟ್ಟು ಹಿಡಿದಿದ್ದವು ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿಯವರು ಕಪ್ಪು ಹಣದ ವಿರುದ್ಧ ಸಮರ ಸಾರಿದ್ದು ಸಾವಿರ ಐನೂರು ಮುಖ ಬೆಳೆಯ ನೋಟುಗಳನ್ನ ನಿಷೇದ ಮಾಡಿರುವ ಸಂದರ್ಭದಲ್ಲಿ ಐನೂರು ಕೋಟಿ ರೂ.ಗು ಅಧಿಕ ವೆಚ್ಚ ಮಾಡಿ ಮದುವೆ ಮಾಡಿರುವುದು ಅನುಮಾನ ಹುಟ್ಟಿಸಿತ್ತು ಇಂದು ಐಟಿ ಅಧಿಕಾರಿಗಳು ರೆಡ್ಡಿ ಒಡೆತನದ ಎರಡು ಕಚೇರಿಗಳಿಗೆ ತೆರಳಿ ದಾಖಲೆಗಳನ್ನ ಪರಿಶೀಲಿಸಿದ್ದಾರೆ ನಿವಾಸಕ್ಕೂ ತೆರಳಿ ದಾಖಲೆಗಳ ಪರಿಶೀಲನೆ ನಡೆಸಲಿದ್ದಾರೆ.

ಮಗಳ ಮದುವೆ ಮಾಡಿ ಸಂತಸದ ಹಿನ್ನೆಲೆಯಲ್ಲಿ ಹಂಪಿ ಪ್ರವಾಸಲಿದ್ದ ಜನಾರ್ದನರೆಡ್ಡಿ ಅವರಿಗೆ ಶಾಕ್ ನೀಡಿದೆ 2011 ರ ಸೆಪ್ಟೆಂಬರ್ ತಿಂಗಳಲ್ಲಿ ಸಿಬಿಐ ಅಧಿಕಾರಿಗಳು ರೆಡ್ಡಿ ನಿವಾಸದ ಮೇಲೆ ದಾಳಿ ನಡೆಸಿ ಅಕ್ರಮ ಗಣಿ ಗಾರಿಕೆ ಆರೋಪದ ಅಡಿ ಬಂಧಿಸಿದ್ದರು ಮೂರೂ ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿ ಇದ್ದ ಅವರು ಹಲವು ಷರತ್ತುಗಳ ಮೇಲೆ ಜಾಮೀನು ಪಡೆದು ಬಿಡುಗಡೆ ಯಾಗಿದ್ದರು ಬಳ್ಳಾರಿಗೆ ಕಾಲು ಇಡುವಂತಿರಲ್ಲ ಮಗಳ ಮದುವೆ ಹಿನ್ನೆಲೆಯಲ್ಲಿ ವಿಶೇಷ ಅನುಮತಿ ಪಡೆದು ಬಲರಿ ಬಳ್ಳಾರಿ ತೆರಳಿದ್ದರು ಇಂದು ಐಟಿ ಅಧಿಕಾರಿಗಳೂ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದೂ ರೆಡ್ಡಿ ಕೋಟೆ ಯಲ್ಲಿ ಹೊಸ ನಡುಕ ಉಂಟಾಗಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin