ಅದ್ದೂರಿಯಾಗಿ ಸೆಟ್ಟಿರಿತು ಅಂಬಿ ಪುತ್ರನ ‘ಅಮರ್’ ಚಿತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 28- ರೆಬೆಲ್‍ಸ್ಟಾರ್ ಅಂಬರೀಷ್ ಹಾಗೂ ನಟಿ ಸುಮಲತಾ ಅವರ ಪುತ್ರ ಅಭಿಷೇಕ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಇಂದು ಅವರು ನಟಿಸುತ್ತಿರುವ ಅಮರ್ ಚಿತ್ರದ ಮುಹೂರ್ತವು ಜೆಪಿ ನಗರದ ತಿರುಮಲಗಿರಿ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.  ಈ ವೇಳೆ ಮಾತನಾಡಿದ ರೆಬೆಲ್‍ಸ್ಟಾರ್ ಅಂಬರೀಷ್, ನನ್ನ ಪುತ್ರ ಅಭಿ ಚಿತ್ರರಂಗಕ್ಕೆ ಬರುತ್ತಿರುವುದು ಸಂತಸವಾಗಿದ್ದು, ನನ್ನ ಆತ್ಮೀಯ ಗೆಳೆಯರಾಗಿರುವ ಸಂದೇಶ್ ನಾಗರಾಜ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ, ಅವರ ಮೊದಲ ನಿರ್ಮಾಣದ ಮಣ್ಣಿನದೋಣಿ ಚಿತ್ರದಲ್ಲಿ ನಾನು ನಾಯಕನಾಗಿದ್ದೆ, ಈಗ ನನ್ನ ಮಗ ನಟಿಸುತ್ತಿರುವ ಮೊದಲ ಚಿತ್ರವನ್ನು ಸಂದೇಶ್ ನಿರ್ಮಿಸುತ್ತಿರುವುದು ಸಂತಸ ತಂದಿದೆ ಎಂದರು.

Ambi--01

ಇದೇ ವೇಳೆ ಅಂಬಿ ನಾಗರಹಾವು ಚಿತ್ರದ ಚಿತ್ರೀಕರಣವನ್ನು ಮೆಲುಕು ಹಾಕಿದರಲ್ಲದೆ ಪುತ್ರನಿಗೆ ಅಭಿನಯ ಹಾಗೂ ಚಿತ್ರೀಕರಣದ ಸ್ಥಳದಲ್ಲಿ ಹೇಗಿರಬೇಕೆಂಬ ಬಗ್ಗೆ ಕೆಲವು ಟಿಪ್ಸ್‍ಗಳನ್ನು ನೀಡಿದರು. ನಟಿ ಸುಮಲತಾ ಅವರು ಮಾತನಾಡಿ, ನನ್ನ ಪುತ್ರ ನಟಿಸುತ್ತಿರುವ ಅಮರ್ ಚಿತ್ರವು ಇಂದು ಮುಹೂರ್ತ ಆಚರಿಸಿಕೊಂಡಿರುವುದು ಸಂತಸವಾಗಿದೆ ಎಂದರು.

ಚಿತ್ರ ನಿರ್ದೇಶಕ ನಾಗಶೇಖರ್ ಮಾತನಾಡಿ, ನಾವು ರೆಬೆಲ್‍ಸ್ಟಾರ್ ಅಂಬರೀಷ್ ಅವರ ಚಿತ್ರವನ್ನು ನೋಡಿಕೊಂಡು ಬೆಳೆದವರು, ಇಂದು ಅವರ ಪುತ್ರನ ಮೊದಲ ಚಿತ್ರವನ್ನು ನಿರ್ದೇಶಿಸುವ ಸೌಭಾಗ್ಯ ದೊರೆತಿದೆ. ಅಲ್ಲದೆ ಈ ಚಿತ್ರದ ಟೈಟಲ್‍ಅನ್ನು ಸುಮಲತಾರವರೇ ನೀಡಿದರು ಎಂದರು.  ಇಂದು ಉತ್ತಮ ದಿನವಾಗಿರುವುದರಿಂದ ಅಮರ್ ಚಿತ್ರದ ಮುಹೂರ್ತ ಸಮಾರಂಭವನ್ನು ಮಾಡಿಕೊಂಡಿದ್ದರೂ ಜೂನ್ ತಿಂಗಳಲ್ಲಿ ಚಿತ್ರೀಕರಣ ನಡೆಯಲಿದೆ. ಇದಕ್ಕೂ ಮುನ್ನ ಅಭಿಷೇಕ್‍ರನ್ನು ಅದ್ಧೂರಿಯಾಗಿ ಪರಿಚಯಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದು ಇದಕ್ಕೆ ಭಾರತೀಯ ಚಿತ್ರರಂಗದ ಸ್ಟಾರ್ ನಟರುಗಳಾದ ಅಮಿತಾಬ್‍ಬಚ್ಚನ್, ರಜನಿಕಾಂತ್, ಚಿರಂಜೀವಿಯಂತಹ ಶ್ರೇಷ್ಠ ನಟರನ್ನು ಕರೆಸುತ್ತೇವೆ ಎಂದರು.

ಅ ಅಕ್ಷರದಿಂದ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಶಿವರಾಜ್‍ಕುಮಾರ್, ಪುನೀತ್‍ರಾಜ್‍ಕುಮಾರ್, ಧ್ರುವಸರ್ಜಾರವರು ಕನ್ನಡಿಗರ ಮನಸ್ಸನ್ನು ಗೆದ್ದಂತೆ ಅಭಿ ಕೂಡ ಪ್ರೇಕ್ಷಕರ ಮನ ಗೆಲ್ಲುತ್ತಾರೆ ಎಂದು ನಾಗಶೇಖರ್ ಹೇಳಿದರು. ಸಂದೇಶ್‍ನಾಗರಾಜ್ ಅವರು ನಿರ್ಮಿಸಿ, ನಾಗಶೇಖರ್ ಅವರು ನಿರ್ದೇಶಿಸುತ್ತಿರುವ ಅಮರ್ ಚಿತ್ರದಲ್ಲಿ ಅಭಿಷೇಕ್‍ಗೆ ನಾಯಕಿ ತಾನ್ಯಾ ಹೋಪ್ ಬಣ್ಣ ಹಚ್ಚುತ್ತಿದ್ದು ಅಭಿಷೇಕ್ ನಾಯಕಿಯಲ್ಲಿ ಪ್ರೇಮನಿವೇದನೆ ಮಾಡುವ ಮೊದಲ ದೃಶ್ಯಕ್ಕೆ ಸಂದೇಶ್‍ನಾಗರಾಜ್ ಅವರ ಪುತ್ರಿ ಬೃಂದಾ ನಾಗರಾಜ್ ಕ್ಲಾಪ್ ಮಾಡಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin