ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ, ಸಮಾಜ ಕಲ್ಯಾಣ ಅಧಿಕಾರಿ ಆತ್ಮಹತ್ಯೆಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

tumakuru-000

ತುಮಕೂರು, ಸೆ.8- ಹಿರಿಯ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸಿಬ್ಬಂದಿಗಳ ಎದುರಿನಲ್ಲೇ ನಿಂದಿಸುತ್ತಾರೆಂದು ಆರೋಪಿಸಿ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು ಕಚೇರಿಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.ಜಿಲ್ಲಾ ಪಂಚಾಯ್ತಿ ಪಕ್ಕದಲ್ಲಿರುವ ತಾಲೂಕು ಸಮಾಜ ಕಲ್ಯಾಣ ಕಚೇರಿಗೆ ಬಂದಿದ್ದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುಬ್ರಹ್ಮಣ್ಯ ಹಾಗೂ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶಮೀನ್ ತಾಜ್ ಇವರುಗಳ ನಡುವೆ ದಾಖಲಾತಿ ಪರಿಶೀಲನೆ ವೇಳೆ ಮಾತಿನ ಚಕಮಕಿ ನಡೆದಿದೆ.ಈ ಸಂದರ್ಭದಲ್ಲಿ ಸಿಬ್ಬಂದಿ ಸಮ್ಮುಖದಲ್ಲೇ ಅಶ್ಲೀಲವಾಗಿ ನಿಂದಿಸಿದರಲ್ಲದೆ ನನ್ನ ಜತೆ ಅಸಭ್ಯವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದಾಗಿ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಶಮೀನಾ ತಾಜ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ:

ನಾನು ತುಮಕೂರಿಗೆ ಬಂದಾಗಿನಿಂದಲೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುಬ್ರಹ್ಮಣ್ಯ ಅವರಿಂದ ನಿರಂತರ ಕಿರುಕುಳ ಅನುಭವಿಸುತ್ತಿದ್ದೇನೆ. ಎರಡು ವರ್ಷದಲ್ಲಿ ನನ್ನಿಂದ 4 ಲಕ್ಷ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.ಇದಲ್ಲದೆ, ಪ್ರತಿ ತಿಂಗಳು ಹಾಸ್ಟೆಲ್ ವಾರ್ಡನ್‍ಗಳಿಂದ 1 ಲಕ್ಷ ಹಣ ಕೊಡಬೇಕು. ಇದಕ್ಕೆ ಉದಾಹರಣೆ ಹಾಸ್ಟೆಲ್‍ನ ವಾರ್ಡನ್ ಎಂದು ತಿಳಿಸಿದರು.ಇದಲ್ಲದೆ, ಕಳೆದ 3ರಂದು ನನ್ನನ್ನು ಮನೆಗೆ ಕರೆಸಿಕೊಂಡು ಅವರ ಪತ್ನಿ ಸಮ್ಮುಖದಲ್ಲೇ ನನ್ನನ್ನು ಅಸಭ್ಯವಾಗಿ ಗುಣಗಾನ ಮಾಡಿದರು. ಇದರಿಂದ ಬೇಸತ್ತು ಬಂದಿದ್ದೆ. ನಿನ್ನೆ ಸಿಬ್ಬಂದಿಗಳ ಸಮ್ಮುಖದಲ್ಲಿಯೇ ಹಿಯಾಳಿಸಿದ್ದಾರೆ. ಪ್ರತಿ ದಿನ ನಮ್ಮ ಕಚೇರಿಯಲ್ಲಿಯೇ ಊಟ ತರಿಸಿಕೊಂಡು ಊಟ ಮಾಡುವುದು, ಬರೀ ಮಹಿಳೆಯರೇ ಇರುವ ವಾರ್ಡನ್ ಹಾಸ್ಟೆಲ್‍ಗಳಿಗೆ ಭೇಟಿ ನೀಡುವುದು ಇವರ ವರ್ತನೆಯಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದೆ ಎಂದು ಈ ಸಂಜೆ ಪತ್ರಿಕೆಗೆ ತಿಳಿಸಿದ್ದಾರೆ.

ಈ ಸಂಬಂಧ ಬೆಂಗಳೂರಿನ ಆಯುಕ್ತರಾದ ಸಾವಿತ್ರಿಯವರಿಗೆ ದೂರು ನೀಡಲಾಗಿದ್ದು, ಇಂದು ಮಹಿಳಾ ಪೊಲೀಸ್ ಠಾಣೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.ಈ ವಿಚಾರವಾಗಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸುಬ್ರಹ್ಮಣ್ಯ ಅವರನ್ನು ಈ ಸಂಜೆ ಪತ್ರಿಕೆ ದೂರವಾಣಿಯಲ್ಲಿ ಸಂಪರ್ಕಿಸಿದಾಗ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಮೀನಾ ಅವರು ಮಾಡಿರುವ ಆರೋಪವನ್ನು ನಿರಾಕರಿಸಿದ್ದಾರೆ.ನಾನೊಬ್ಬ ಅಧಿಕಾರಿಯಾಗಿ ಕೆಲವು ಹೆಡ್ ಆಫ್ ಅಕೌಂಟ್ ಹಣ ದುರುಪಯೋಗವಾಗಿದೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿಗಳ ಜತೆ ಪರಿಶೀಲನೆಗೆ ಹೋಗಿದ್ದೇನೆಯೇ ವಿನಃ ಯಾವುದೇ ದೌರ್ಜನ್ಯವಾಗಲಿ ಅಸಭ್ಯ ವರ್ತನೆ ಮಾಡಿಲ್ಲ. ಕೆಲಸ ಕೇಳಿದರೆ ನಮ್ಮಂತಹ ಅಧಿಕಾರಿ ಮೇಲೆ ಇಂತಹ ಆರೋಪ ಮಾಡಿದ್ದಾರೆಂದು ಅವರು ಸ್ಪಷ್ಟಪಡಿಸಿದರು.

 

 

► Follow us on –  Facebook / Twitter  / Google+

Facebook Comments

Sri Raghav

Admin