ಅಧಿಕಾರಿ ಕಿರುಕುಳಕ್ಕೆ ನೊಂದು ಆತ್ಮಹತ್ಯೆಗೆ ಯತ್ನಿಸಿದ ಗುತ್ತಿಗೆ ನೌಕರ

ಈ ಸುದ್ದಿಯನ್ನು ಶೇರ್ ಮಾಡಿ

Bank-Suicide--01

ವಿಜಯಪುರ,ಡಿ.8- ಅಧಿಕಾರಿಯ ಕಿರುಕುಳದಿಂದ ಬೇಸತ್ತ ಗುತ್ತಿಗೆ ನೌಕರ ಸ್ನೇಹಿತರಿಗೆ ನನಗೆ ನ್ಯಾಯ ದೊರಕಿಸಿಕೊಡಿ ಎಂದು ವಾಟ್ಸಪ್ ಸಂದೇಶ ಕಳುಹಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಂದಗಿ ತಾಲ್ಲೂಕಿನ ಓತಿಹಾಳ ಗ್ರಾಮದಲ್ಲಿ ಸಂಭವಿಸಿದೆ. ಗುತ್ತಿಗೆ ನೌಕರ ಬಸವರಾಜ್ ಮಾಲೇಗಾರ್ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.  ಈತ ಬಿಇಒ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದು , ಬಿಇಒ ಆರೀಫ್ ಬಿರಾದಾರ್‍ನ ಹಣ ನೀಡುವಂತೆ ಹೇರುತ್ತಿದ್ದ ಒತ್ತಾಯದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಒಂದು ತಿಂಗಳ ಸಂಬಳವನ್ನು ಕೊಡದಿದ್ದ ಬಸವರಾಜ್‍ನನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ಬಿಇಒ ಅವರ ಈ ಕೃತ್ಯದಿಂದ ಬೇಸತ್ತ ಬಸವರಾಜ್ ತನ್ನ ಸ್ನೇಹಿತರಿಗೆ ನನ್ನ ಸಾವಿಗೆ ನ್ಯಾಯ ದೊರಕಿಸಿಕೊಡಿ ಆದೇಶವಿದ್ದರೂ ಕೆಲಸಕ್ಕೆ ಸೇರಿಸಿಕೊಳ್ಳದಿರುವುದು ನನಗೆ ನೋವುಂಟಾಗಿದೆ ಎಂದು ವಾಟ್ಸಪ್ ಸಂದೇಶ ಕಳುಹಿಸಿ ವಿಷ ಸೇವಿಸಿದ್ದನು.  ವಾಟ್ಸಪ್‍ನ ಸಂದೇಶ ಗಮನಿಸಿದ ಸ್ನೇಹಿತರು ಶಿವ ಸೇವಿಸಿದ್ದ ಬಸವರಾಜ್‍ನನ್ನು ಆಸ್ಪತ್ರೆಗೆ ದಾಖಲಿಸಿದ್ದು , ಬಸವರಾಜ್ ಸ್ಥಿತಿ ಗಂಭೀರವಾಗಿದೆ.

Facebook Comments

Sri Raghav

Admin