ಅಧಿಕಾರ ಸಿಕ್ಕರೆ ಜನಪರ ಕೆಲಸ ಸಾಧ್ಯ ಎಂಬುದನ್ನು ಅರಸು ತೋರಿಸಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

madhugiri

ಮಧುಗಿರಿ, ಆ.23- ಉತ್ತಮ ಕಾರ್ಯಗಳನ್ನು ಮಾಡುವ ಮಹತ್ವಕಾಂಕ್ಷಿಗಳು ಅಧಿಕಾರಕ್ಕೆ ಬಂದರೆ ಮಾತ್ರ ಜನಪರ ಕೆಲಸಗಳನ್ನು ನಿರ್ವಹಿಸಲು ಸಾಧ್ಯ ಎಂಬುದನ್ನು ದೇವರಾಜು ಅರಸು ಅವರು ತೋರಿಸಿಕೊಟ್ಟಿದ್ದಾರೆ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯ ಪಟ್ಟರು.ಪಟ್ಟಣದ ಮಾಲೀಮರಿಯಪ್ಪ ರಂಗಮಂದಿರದಲ್ಲಿ ಏರ್ಪಡಿಸಿದ್ದ ಡಿ.ದೇವರಾಜು ಅರಸುರವರ ಮತ್ತು ರಾಜೀವ್ ಗಾಂದೀ ಜನ್ಮ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ದೇವರಾಜು ಅರಸು ಅಧಿಕಾರಕ್ಕೆ ಬಂದು ಸುಧಾರಣೆಗಳನ್ನು ಜಾರಿಗೆ ತರದೇ ಹೋಗಿದ್ದಲ್ಲಿ ಇಂದು ಬಡವರ ಪರಿಸ್ಥಿತಿ ಶೋಚನೀಯವಾಗಿರುತ್ತಿತ್ತು.

ನಾಗರೀಕ ಸಮಾಜದ ಸೃಷ್ಟಿಗೆ ಅಗತ್ಯವಿರುವ ಸುದಾರಣೆಗಳನ್ನು ಮತ್ತು ಮೀಸಲಾತಿಯನ್ನು ಜಾರಿಗೆ ತಂದ ಪರಿಣಾಮ ಇಂದು ಪ್ರತೀ ಮನೆಯಲ್ಲೂ ವಿದ್ಯಾವಂತರಿದ್ದಾರೆ. ಹಾವನೂರು ವರದಿ ಅನ್ವಯ ಶಾಲೆಗಳಲ್ಲಿ ಮಕ್ಕಳ ಪ್ರವೇಶಕ್ಕೆ ಮೀಸಲಾತಿ ನಿಗದಿಗೊಳಿಸಿದ ಕೀರ್ತಿ ದೇವರಾಜು ಅರಸುರವರಿಗೆ ಸಲ್ಲುತ್ತದೆ ಎಂದರು.ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ದೇಶದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಅದಕ್ಕೆ ಮಾಜಿ ಪ್ರಧಾನಿ ರಾಜೀವ್ ಗಾಂಧೀ ಕಾರಣ ಎಂದು ಹೇಳಿದರು.
ಉಪವಿಭಾಗಾಧಿಕಾರಿ ಅನಿತಾಲಕ್ಷ್ಮೀ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ದೇವರಾಜು ಅರಸು ನಿಗಮದಿಂದ 30 ಫಲಾನುಭವಿಗಳಿಗೆ ಚೆಕ್, ಹೊಲಿಗೆ ಯಂತ್ರ ವಿತರಿಸಲಾಯಿತು. ಜಿಪಂ ಸದಸ್ಯರಾದ ಚೌಡಪ್ಪ, ಜಿ.ಜೆ.ರಾಜಣ್ಣ, ಪುರಸಭಾಧ್ಯಕ್ಷೆ ರಾಧಾನಾರಾಯಣ್, ಮಾಜಿ ಅಧ್ಯಕ್ಷರಾದ ಎನ್.ಗಂಗಣ್ಣ, ಅಯೂಬ್, ನಂಜುಂಡರಾಜು, ಉಪಾಧ್ಯಕ್ಷ ಗಣೇಶ್, ತಾ.ಪಂ ಉಪಾಧ್ಯಕ್ಷ ಲಕ್ಷ್ಮೀನರಸಪ್ಪ, ತಹಶೀಲ್ದಾರ್ ಅನಂತರಾಮು, ತಾ.ಪಂ ಇ.ಓ ಮಹಲಿಂಗಯ್ಯ, ಮುಖ್ಯಾಧಿಕಾರಿ ನವೀನ್ ಚಂದ್ರ, ನೌಕರರ ಸಂಘದ ಅಧ್ಯಕ್ಷ ಮಹಲಿಂಗೇಶ್, ಡಿ.ಡಿ.ಪಿ.ಐ ರಾಜೇಂದ್ರ, ಬಿ.ಇ.ಓ ರಾಜಣ್ಣ, ಪುರಸಭಾ ಸದಸ್ಯ ಎಂ.ಎಸ್. ಚಂದ್ರಶೇಖರ್, ಮತ್ತಿತರರಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin