ಅಧಿಕೃತ ಕ್ರಿಕೆಟ್’ಗೆ ದಕ್ಷಿಣ ಆಫ್ರಿಕಾ ಪಾರ್ದಾಪಣೆ ಮಾಡಿ ಇಂದಿಗೆ 25 ವರ್ಷ

ಈ ಸುದ್ದಿಯನ್ನು ಶೇರ್ ಮಾಡಿ

South-Africa

ದೆಹಲಿ, ನ.10-ವರ್ಣಬೇಧ ನೀತಿಯಿಂದಾಗಿ 1970ರಿಂದ ಕ್ರೀಡಾ ಜಗತ್ತಿನಿಂದ ಹೊರಗೆ ಉಳಿದಿದ್ದ ದಕ್ಷಿಣ ಆಫ್ರಿಕಾಗೆ 25 ವರ್ಷ ಹಿಂದೆ ಈ ದಿನ ತುಂಬಾ ಮಹತ್ವದ್ದಾಗಿತ್ತು. 46 ವರ್ಷಗಳ ಬಳಿಕ ತನ್ನ ಪ್ರಥಮ ಅಧಿಕೃತ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಲು ಆ ದೇಶಕ್ಕೆ ಅವಕಾಶ ದೊರೆಯಿತು.  ದಕ್ಷಿಣ ಆಫ್ರಿಕಾ ಕ್ರೀಡಾ ಇತಿಹಾಸದಲ್ಲಿ 1991ನೇ ನವೆಂಬರ್ 10 ಅತ್ಯಂತ ಮಹತ್ವ ದಿನ. ವರ್ಣಬೇಧ ನೀತಿಯಿಂದಾಗಿ 1970ರಿಂದ ಕ್ರೀಡಾ ಜಗತ್ತಿನಿಂದ ಹೊರಗೆ ಉಳಿದಿದ್ದ ದಕ್ಷಿಣ ಆಫ್ರಿಕಾ ಮತ್ತೆ ಇದೇ ದಿನ ಕ್ರೀಡಾಲೋಕಕ್ಕೆ ವಿಧ್ಯುಕ್ತವಾಗಿ ಸೇರ್ಪಡೆಯಾಯಿತು. 46 ವರ್ಷಗಳ ಬಳಿಕ ತನ್ನ ಪ್ರಥಮ ಅಧಿಕೃತ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಿದ್ದ ಸಂತಸ ಆ ದೇಶದ ನೆನೆಪಿನಲ್ಲಿ ಉಳಿಯುವಂತೆ ಮಾಡಿತು.

1991-92ರಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಭಾರತದಲ್ಲಿ ಪ್ರವಾಸ ಕೈಗೊಂಡಿತ್ತು. ಭಾರತದ ವಿರುದ್ಧ ಮೂರು ಏಕ ದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯಲ್ಲಿ ಭಾಗವಹಿಸಲು ಪ್ರವಾಸಿ ತಂಡವಾಗಿ ಭಾರತಕ್ಕೆ ಆಗಮಿಸಿತ್ತು.  ಇದು ದಕ್ಷಿಣ ಆಫ್ರಿಕಾದ ಅಧಿಕೃತ ಪ್ರಥಮ ಅಂತಾರಾಷ್ಟ್ರೀಯ ಏಕದಿನ ಪಂದ್ಯವಾಗಿತ್ತು. ಭಾರತವು 2-1 ಗೆಲುವಿನೊಂದಿಗೆ ಸರಣಿಯನ್ನು ತನ್ನದಾಗಿಸಿಕೊಂಡಿತು. ಸಂಜಯ್ ಮಂಜ್ರೇಕರ್ ಮತ್ತು ಕೆಪ್ಲೆರ್ ವೆಸ್ಸೆಲ್ಸ್ ಕ್ರಮವಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಪಂದ್ಯದ ಪುರುಷೋತ್ತಮರಾದರು.  ಮೊದಲ ಪಂದ್ಯವನ್ನು 47 ಓವರ್‍ಗಳಿಗೆ ಸೀಮಿತಗೊಳಿಸಲಾಯಿತು. ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ದಕ್ಷಿಣ ಆಫ್ರಿಕಾ 47 ಓವರ್‍ಗಳಲ್ಲಿ 8 ವಿಕೆಟ್‍ಗಳ ನಷ್ಟಕ್ಕೆ 177 ರನ್ ಗಳಿಸಿತು. ವೆಸ್ಸೆಲ್ಸ್ ಅರ್ಧಶತಕ ಬಾರಿಸಿದರು. ಈ ಗುರಿಯನ್ನು ಬೆನ್ನಟ್ಟಿದ ಭಾರತವು ಅಲಾನ್ ಡೊನಾಲ್ಡ್‍ರ ಮಾರಕ ಬೌಲಿಂಗ್‍ನಲ್ಲಿ ಆರಂಭದಲ್ಲೇ 20 ಗನ್‍ಗಳನ್ನು ಗಳಿಸಿ 3 ಪ್ರಮುಖ ವಿಕೆಟ್‍ಗಳು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

62 ರನ್‍ಗಳನ್ನು ಗಳಿಸಿದ ಸಚಿನ್ ತೆಂಡೂಲ್ಕರ್ ಮತ್ತು 55 ರನ್‍ಗಳನ್ನು ಕಲೆ ಹಾಕಿದ ಉದಯೋನ್ಮುಖ ಆಟಗಾರ ಪ್ರವೀಣ್ ಅಮ್ರೆ ನೆರವಿನಿಂದ ಭಾರತ ಜಯ ಸಾಧಿಸಿತು. ಇದರೊಂದಿಗೆ ಸರಣಿಯಲ್ಲಿ 1-0 ಗೆಲುವಿನ ಮುನ್ನಡೆ ಸಾಧಿಸಿತು.  ಬಳಿಕ ನಡೆದ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಮತ್ತು ದಕ್ಷಿಣ ಆಪ್ರಿಕಾ ತಲಾ ಒಂದೊಂದು ಪಂದ್ಯವನ್ನು ತನ್ನದಾಗಿಸಿಕೊಂಡವು. ಮೂರು ಏಕದಿನಗಳ ಸರಣಿಯಲ್ಲಿ ಭಾರತವು 2-1ರಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿತು. ತನ್ನ ಚೊಚ್ಚಲ ಏಕದಿನ ಅಂತಾರಾಷ್ಟ್ರೀಯ ಸರಣಿಯಲ್ಲೇ ಅತ್ಯುತ್ತಮ ಪ್ರದರ್ಶನ ನೀಡಿದ ದಕ್ಷಿಣ ಆಫ್ರಿಕಾ ಕ್ರಿಕೆಟ್ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin