ಅಧಿವೇಶನದಲ್ಲಿ ಮಹದಾಯಿ-ಕಳಸಾಬಂಡೂರಿ ಕುರಿತು ಚರ್ಚಿಸುವಂತೆ ಶೆಟ್ಟರ್ ಗೆ ರೈತರ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

S-Jagadish-Shettar
ಹುಬ್ಬಳ್ಳಿ, ನ.20- ಮಹದಾಯಿ-ಕಳಸಾಬಂಡೂರಿ ಯೋಜನೆಯ ಬಗ್ಗೆ ಅವೇಶನದಲ್ಲಿ ಚರ್ಚಿಸಿ ಈ ಭಾಗದ ಜನರಿಗೆ ಅಗತ್ಯವಿರುವ ನೀರಿನ ಸೌಲಭ್ಯ ಕಲ್ಪಿಸುವ ಬಗ್ಗೆ ಅವೇಶನದಲ್ಲಿ ಚರ್ಚಿಸುವಂತೆ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರಿಗೆ ರೈತರ ನಿಯೋಗ ಒತ್ತಾಯಿಸಿದೆ. ಅವರ ನಿವಾಸದಲ್ಲಿ ಭೇಟಿಯಾದ ರೈತ ಮುಖಂಡರು ಅವೇಶನದಲ್ಲಿ ರೈತರ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯುವಂತೆ ಒತ್ತಾಯ ಹೇರಬೇಕು. ಬರ ಪರಿಸ್ಥಿತಿಯ ನಿರ್ವಹಣೆಗೆ ಅಗತ್ಯವಿರುವ ಹೆಚ್ಚಿನ ಪರಿಹಾರ ಒದಗಿಸುವಂತೆ ಆಗ್ರಹಿಸಬೇಕು ಎಂದ ಹೇಳಿದರು. ಗೋವಾ ಹಾಗೂ ಮಹರಾಷ್ಟ್ರದ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಚರ್ಚೆ ನಡೆಸುವಂತೆಯೂ ಮನವಿ ಮಾಡಿದರು. ರೈತರ ನಿಯೋಗದ ಮನವಿಗೆ ಸ್ಪಂದಿಸಿದ ಶೆಟ್ಟರ್, ಅವೇಶನದಲ್ಲಿ ಮಹದಾಯಿ ಹಾಗೂ ಕಳಸಾಬಂಡೂರಿ ಬಗ್ಗೆ ವಿಸ್ತೃತ ಚರ್ಚೆ ಮಾಡುವ ಭರವಸೆ ನೀಡಿದರು. ನಿಯೋಗದಲ್ಲಿ ಗದಗ, ನರಗುಂದ, ನವಲಗುಂದ ಸೇರಿದಂತೆ ಬಾಗಲಕೋಟೆ ಜಿಲ್ಲೆಯ ರೈತ ಮುಖಂಡರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin