ಅಧ್ಯಕ್ಷರಾಗಿ ವೈಶಾಲಿ ಘಂಟಿ ಅವಿರೋಧ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

8

ಇಳಕಲ್,ಫೆ.4- ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಇಲ್ಲಿನ ನಗರಸಭೆ ಅಧ್ಯಕ್ಷರಾಗಿ 1ನೇ ವಾರ್ಡಿನ 5ನೇ ಡಿವ್ಹಿಜನ್ ಕಾಂಗ್ರೆಸ್ ಸದಸ್ಯೆ ವೈಶಾಲಿ ಸಿದ್ದಪ್ಪ ಘಂಟಿ (ಸೂಳಿಭಾವಿ) ಅವಿರೋಧವಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳಾ ಮೀಸಲಾತಿ ಹೊಂದಿದ್ದು ಹಾಲುಮತ ಸಮಾಜದ ಮಹಿಳೆ ಆಯ್ಕೆಯಾಗಿರುವುದು ಸಂತಸದ ಸಂಗತಿ, ಇವರಿಂದಲಾದರೂ ನಗರದ ಅಭಿವೃದ್ದಿ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ ಎಂಬ ಭಾರೀ ನಿರೀಕ್ಷೆಯಲ್ಲಿದ್ದಾರೆ ನಗರದ ಜನತೆ.ಈ ಭಾರಿ ಶಾಸಕ ವಿಜಯಾನಂದ ಕಾಶಪ್ಪ ಅವರು ವೈಶಾಲಿ ಘಂಟಿ ಅಧ್ಯಕ್ಷರಾಗಿಸಿ ಆಯ್ಕೆಗೊಳ್ಳಲು ಸೂಚಿಸಿದ್ದರಿಂದ ಬಹುಮತದಿಂದ ಅವರು ಆಯ್ಕೆಗೊಂಡರು. ನಗರಸಭೆ ಗೆ 31 ಸದಸ್ಯರನ್ನು ಒಳಗೊಂಡಿದ್ದು ಅದರಲ್ಲಿ ಇಬ್ಬರು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಅಮಾನತ್ತುಗೊಂಡಿದ್ದಾರೆ. ಈಗ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಇದ್ದರು ಸಹ ಒಬ್ಬರು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದೆ ಇರುವುದನ್ನು ನೋಡಿದರೆ ವಿರೋಧ ಪಕ್ಷ ಇದ್ದು ಇಲ್ಲದಂತಾಗಿದೆ ಎಂದು ಜನ ಮಾತನಾಡುತ್ತಿದ್ದಾರೆ.

ಅಧ್ಯಕ್ಷ ಚುನಾವಣೆಯಲ್ಲಿ ಆಡಳಿತ ಪಕ್ಷದ ಎಲ್ಲ ಸದಸ್ಯರಿದ್ದು ವಿರೋಧ ಪಕ್ಷದ ಸದಸ್ಯರಲ್ಲಿ ಮಂಜುನಾಥ ಶೆಟ್ಟರ ಗೈರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ತೇಜಮ್ಮ ವದ್ದಿ ರಾಜಿನಾಮೆ ನೀಡಿದ್ದರಿಂದ ಈ ಚುನಾವಣೆ ನಡೆಯಿತು. ನಗರಸಭೆಯ ಎಸ್.ಆರ್. ಕಂಠಿ ಸಭಾ ಭವನದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಬಾಗಲಕೋಟ ಉಪವಿಭಾಗಧಿಕಾರಿ, ಚುನಾವಣಾಧಿಕಾರಿ ಆಗಿರುವ ಡಾ. ಶಂಕರಗೌಡ ಸೋಮನಾಳ ಚುನಾವಣಾ ಪ್ರಕ್ರಿಯೆ ನಡೆಸಿ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿದ್ದರು ಸೂಚಕರಾಗಿ ದೇವಾನಂದ ಕಾಶಪ್ಪ ಅವರ ಅನುಮೊದಕರಾಗಿ ರಾಘವೇಂದ್ರ ಚಿಂಚಮಿ ನಾಮಪತ್ರಕ್ಕೆ ಸಹಿ ಮಾಡಿದ್ದರು ಅಧ್ಯಕ್ಷರೆಂದು ವೈಶಾಲಿ ಘಂಟಿ ಅವಿರೋಧವಾಗಿ ಆಯ್ಕೆ ಗೊಂಡರು ಎಂದು ಘೋಷಿಸಿದರು.

ಇಳಕಲ್ ನಗರಸಭೆಯ ನೂತನ ಅಧ್ಯಕ್ಷರಾಗಿ ವೈಶಾಲಿ ಘಂಟಿ ಆಯ್ಕೆ ಘೋಷಣೆ ಆಗುತ್ತಿದ್ದಂತೆ ನಗರಸಭೆ ಹೊರಗಡೆ ಮತ್ತು ಕಂಠಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಘಂಟಿ ಅವರ ಅಭಿಮಾನಿಗಳು, ಸಮಾಜ ಭಾಂದವರು ಸಿಹಿ ಹಂಚಿ ಗುಲಾಲು ಎರಚಿ ಪಟಾಕಿ ಸಿಡಿಸಿ ಸಂಭ್ರಮಿಸಿ ಕುಣಿದು ಕುಪ್ಪಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin