ಅಧ್ಯಾತ್ಮಿಕತೆ ಕೊರತೆ ರೈತರ ಆತ್ಮಹತ್ಯೆ ಕಾರಣ : ಶ್ರೀ ರವಿಶಂಕರ್ ಗುರೂಜಿ ವಿಶ್ಲೇಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Ravishankar-Guruji--01ಮುಂಬೈ, ಏ.20 – ಅಧ್ಯಾತ್ಮಿಕತೆ ಕೊರತೆ ರೈತರ ಆತ್ಮಹತ್ಯೆಗಳ ಕಾರಣಗಳಲ್ಲಿ ಒಂದು ಎಂದು ಆರ್ಟ್ ಆಫ್ ಲೀವಿಂಗ್ ಸಂಸ್ಥಾಪಕರಾದ ಶ್ರೀ ರವಿಶಂಕರ್ ಗುರೂಜಿ ವ್ಯಾಖ್ಯಾನಿಸಿದ್ದಾರೆ. ಮುಂಬೈನಲ್ಲಿ ನಡೆದ ಆಧ್ಯಾತ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ದೇಶದ ಅನೇಕ ರಾಜ್ಯಗಳಲ್ಲಿ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಮರಕಳಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.   ನಾವು ವಿದರ್ಭ ಜಿಲ್ಲೆಯ 512 ಗ್ರಾಮಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದೇವೆ. ಅಲ್ಲಿನ ಸ್ಥಿತಿ-ಗತಿಗಳನ್ನು ಅವಲೋಕಿಸಿದ ಮೇಲೆ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಬಡತನ ಮತ್ತು ಬೆಳೆ ನಷ್ಟವೊಂದೇ ಕಾರಣವಲ್ಲ. ಈ ನತದೃಷ್ಟ ಜನರಲ್ಲಿ ಅಧ್ಯಾತ್ಮಿಕತೆ ಅಭಾವ ಇರುವುದು ಕಂಡುಬಂದಿದೆ ಎಂದು ಶ್ರೀಗಳು ವಿಶ್ಲೇಷಿಸಿದರು.ಯೋಗ ಮತ್ತು ಪ್ರಾಣಾಯಾಮವು ಆತ್ಮಹತ್ಯಾ ಆಲೋಚನೆಯ ಪ್ರವೃತ್ತಿಯನ್ನು ಹೋಗಲಾಡಿಸಲು ಪ್ರಮುಖ ಸಾಧನವಾಗಿದೆ ಎಂದು ಸಲಹೆ ಮಾಡಿದ ಅವರು ಅಧ್ಯಾತ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲರೂ ಅನ್ನದಾತರಲ್ಲಿ ಆಧ್ಯಾತ್ಮದ ಮಹತ್ವವನ್ನು ಮನವರಿಕೆ ಮಾಡಿಕೊಟ್ಟು ಅವರ ರಕ್ಷಣೆಗೆ ಧಾವಿಸಬೇಕೆಂದು ಮನವಿ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin