ಬಾಂಗ್ಲಾ ಗಡಿಯಲ್ಲಿ ಅನಾರೋಗ್ಯದಿಂದ ಕರ್ತವ್ಯನಿರತ ಮಡಿಕೇರಿ ಯೋಧ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Soldier-Army

ಮಡಿಕೇರಿ, ಜ.12- ಬಾಂಗ್ಲಾ ಗಡಿಯಲ್ಲಿ ಕರ್ತವ್ಯದಲ್ಲಿದ್ದ ಮಡಿಕೇರಿಯ ಯೋಧ ಅನಾರೋಗ್ಯದಿಂದ ಮೃತಪಟ್ಟಿದ್ದು, ಇಂದು ಸಂಜೆ ಸ್ವಗ್ರಾಮಕ್ಕೆ ಪಾರ್ಥೀವ ಶರೀರ ಆಗಮಿಸಲಿದೆ. ತಾಲ್ಲೂಕಿನ ಮದೆ ಗ್ರಾಮದ ಹುದೇರಿ ಮೋಹನ್ ಅಪ್ಪಣ್ಣ(51) ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರನ್ನು ಬಾಂಗ್ಲಾ ಗಡಿಯಲ್ಲಿರುವ ಮಾಲ್ಡಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಾಂಗ್ಲಾದೇಶದ ಗಡಿ ಮಾಲ್ಡಾದಲ್ಲಿ ಮೋಹನ್ ಅಪ್ಪಣ್ಣ ಗಡಿಭದ್ರತಾಪಡೆ ಯಲ್ಲಿ ಸಬ್‍ಇನ್ಸ್‍ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಬ್ರೇನ್ ಹ್ಯಾಮರೇಜ್ ಆಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಂಜೆ ಸ್ವಗ್ರಾಮಕ್ಕೆ ಅವರ ಪಾರ್ಥೀವಶರೀರವನ್ನು ಸರ್ಕಾರಿ ಗೌರವಗಳೊಂದಿಗೆ ತರಲಾಗುವುದು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin