ಅನಿಷ್ಟ ಪದ್ಧತಿ ತೊಲಗಿದರೆ ಮಾತ್ರ ಪ್ರಶಸ್ತಿಗೆ ಅರ್ಥ : ವಿಲ್ಸನ್

ಈ ಸುದ್ದಿಯನ್ನು ಶೇರ್ ಮಾಡಿ

Kgf

ಕೆಜಿಎಫ್, ಆ.9-ದೇಶದಾದ್ಯಂತ ಸಫಾಯಿ ಕರ್ಮಚಾರಿಗಳು ಇನ್ನೂ ಅನಿಷ್ಟ ಪದ್ಧತಿಯನ್ನು ಪಾಲಿಸುತ್ತಿರುವ ಸಂದರ್ಭದಲ್ಲಿ ಪ್ರಶಸ್ತಿಗಳನ್ನು ಸ್ವೀಕರಿಸಲು ಮುಜುಗುರವಾಗುತ್ತಿದೆ ಎಂದು ಮ್ಯಾಗ್ಸೆಸೆ ಪ್ರಶಸ್ತಿ ವಿಜೇತ ಬೆಜವಾಡ ವಿಲ್ಸನ್ ಹೇಳಿದರು.ಮಾರಿಕುಪ್ಪಂನಲ್ಲಿ ಚರ್ಚ್ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇನ್ನೂ ಹೋರಾಟ ಮುಂದುವರೆಸಿರುವ ನನಗೆ ಪ್ರಶಸ್ತಿ ಸ್ವೀಕರಿಸುವುದು ಖುಷಿಯಾದ ವಿಚಾರವಾಗಿಲ್ಲ. ಅನಿಷ್ಟ ಪದ್ಧತಿ ತೊಲಗಿದ ನಂತರವೇ ಪ್ರಶಸ್ತಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಮ್ಯಾಗ್ಸೆಸೆ ಪ್ರಶಸ್ತಿ ನನಗೆ ಬಂದಿರುವುದೇ ತಿಳಿದಿರಲಿಲ್ಲ. ಅದನ್ನು ಕೂಡ ನಿರಾಕರಿಸಬೇಕೆಂದುಕೊಂಡಿದ್ದೆ. ಆದರೆ ಪ್ರಶಸ್ತಿ ಪಡೆದರೆ ಹೋರಾಟಕ್ಕೆ ಹೆಚ್ಚಿನ ಪ್ರಚಾರ, ಬೆಂಬಲ ಸಿಗುತ್ತದೆ ಎಂಬ ಕಾರಣದಿಂದ ಒಪ್ಪಿಕೊಂಡೆ ಎಂದು ವಿಲ್ಸನ್ ಹೇಳಿದರು.ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರನ್ನು ಕಟುವಾಗಿ ಟೀಕಿಸಿದ ಅವರು, ಸ್ವಚ್ಛ ಭಾರತ್ ಆಂದೋಲನ ಮಾಡುವ ಮೊದಲು ಸಫಾಯಿ ಕರ್ಮಚಾರಿಗಳು ಮಲಹೊರುವ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕಿತ್ತು.

 

ಆಧುನಿಕ ತಂತ್ರಜ್ಞಾನ ಅಳವಡಿಸಿ, ಅನಿಷ್ಟ ಪದ್ಧತಿ ನಿವಾರಿಸುವ ಬದ್ಧತೆ ಪ್ರಧಾನಿಗೆ ಇಲ್ಲ ಎಂದು ಟೀಕಿಸಿದರು.ಹಸು ಮಾಂಸ ತಿನ್ನಬಾರದು ಎಂದು ಪ್ರಧಾನಿ ಹೇಳುತ್ತಾರೆ. ನಾಗರಿಕರಿಗೆ ಇದೇ ಆಹಾರ ತಿನ್ನು ಎಂದು ಹೇಳಲು ಇವರಿಗೆ ಅಧಿಕಾರ ಯಾರು ಕೊಟ್ಟರು. ನಾನು ಹಸು ಮಾಂಸ ತಿನ್ನುತ್ತೇನೆ. ಅದನ್ನು ಗರ್ವದಿಂದ ಹೇಳಿಕೊಳ್ಳುತ್ತೇನೆ ಎಂದು ವಿಲ್ಸನ್ ತಿಳಿಸಿದರು.ನಗರಸಭೆ ಆಯುಕ್ತ ಮುನಿಸ್ವಾಮಪ್ಪ, ಫಾ.ಮೋಸಸ್ ಮಾತನಾಡಿದರು.

 

Facebook Comments

Sri Raghav

Admin