ಅನುದಾನ ನೀಡಲು ಸರ್ಕಾರಕ್ಕೆ ಶಿಫಾರಸು

ಈ ಸುದ್ದಿಯನ್ನು ಶೇರ್ ಮಾಡಿ

chinnaswamy

ಬೇಲೂರು, ಅ.20- ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡುವ ಉದ್ದೇಶದಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಲಹೆ ಪಡೆದು ನಿರ್ವಹಣೆಗೆ ಬೇಕಾದ ಅನುದಾನವನ್ನು ನೀಡುವುದಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು 4ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ಜಿ.ಚಿನ್ನಸ್ವಾಮಿ ಹೇಳಿದರು.ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಮಾಲೋಚನ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ 13ನೇ ಹಣಕಾಸು ಆಯೋಗವು ಅನುದಾನವನ್ನು ಜಿಲ್ಲಾ, ತಪಂ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಮಾಡಲಾಗುತಿತ್ತು. ಕೇಂದ್ರದ ಹಣಕಾಸು ಆಯೋಗವು 2015ರಿಂದ 2020ರ ವರೆಗಿನ ಅವಧಿಗೆ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಗೆ 14ನೇ ಹಣಕಾಸು ಆಯೋಗಕ್ಕೆ ಶಿಫಾರಸ್ಸು ಮಾಡಿದೆ. ಆದರೆ 13ನೇ ಹಣಕಾಸು ಆಯೋಗವು ರಾಜ್ಯದಲ್ಲಿ ಒಟ್ಟು ಬರುವ ಆದಾಯದಲ್ಲಿ ಶೇ.32ರಷ್ಟು ಜಿಪಂ, ತಾಪಂ, ಗ್ರಾಪಂಗಳಿಗೆ ಶಿಫಾರಸ್ಸು ಮಾಡಿತ್ತು ಎಂದು ಅವರು ವಿವರಿಸಿದರು.

ತಾಪಂ ಅಧ್ಯಕ್ಷ ತಮ್ಮಣ್ಣಗೌಡ(ಅಶ್ವಥ್) ಮಾತನಾಡಿ, ಅಧಿಕಾರಕ್ಕೆ ಬಂದು 7 ತಿಂಗಳು ಕಳೆದಿದೆ. ಆದರೆ ನಮ್ಮ ಕ್ಷೇತ್ರದ ಅಭಿವೃದ್ದಿ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಇಲ್ಲಿ ಇಷ್ಟೊಂದು ಅವ್ಯವಸ್ಥೆಯಿಂದ ಕೂಡಿದೆ ಎಂಬುದು ಮೊದಲೆ ತಿಳಿದಿದ್ದರೆ ತಾಪಂ ಚುನಾವಣೆಗೆ ಬರುತ್ತಿರಲಿಲ್ಲ. ಕುಡಿಯುವ ನೀರಿಗೆ ಸೇರಿದಂತೆ ಹೆಚ್ಚಿನ ಅನುದಾನವನ್ನು ತಾಪಂಗೆ ಕೊಡಿಸುವುದಕ್ಕೆ 14ನೇ ಆಯೋಗವು ಶಿಫಾರಸ್ಸು ಮಾಡಬೇಕು ಎಂದರು.ಶಾಸಕ ವೈ.ಎನ್.ರುದ್ರೇಶ್‍ಗೌಡ ಮಾತನಾಡಿ, ಜನಪ್ರತಿನಿಧಿಗಳಿಗೆ ಮೊದಲು ಜನರ ಸೇವೆ ಮಾಡುವ ಆಸಕ್ತಿ ಇರಬೇಕು. ಆಗಮಾತ್ರ ಅಭಿವೃದ್ದಿ ಸಾಧ್ಯ.

ತಾಲೂಕಿನ ಅಭಿವೃದ್ದಿಗೆ ಈಗಾಗಲೆ 100 ಕೋಟಿ ರೂ.ಗಳನ್ನು ತಂದಿದ್ದು, ಪರಿಶಿಷ್ಟ ಜಾತಿ ವರ್ಗದ ಭಾಗಗಳಿಗೆ ಶೇ.90 ರಷ್ಟು ಕೆಲಸಗಳನ್ನು ಮಾಡಿಸಲಾಗಿದೆ. ಹಾಗೂ ಮುಖ್ಯಮಂತ್ರಿಗಳು ಈ ವರ್ಗಗಳ ಅಭಿವೃದ್ದಿಗೆ ಎಲ್ಲಾ ಇಲಾಖೆಗಳಲ್ಲೂ ಶೇ.22ರಷ್ಟು ಮೀಸಲಾತಿ ನೀಡಬೇಕೆಂದು ಆದೇಶಿಸಿದ್ದಾರೆ. ಮತ್ತು ತಾಪಂಗೆ ಬರುವಂತಹ ಅನುದಾನ ಕಮ್ಮಿ ಇದ್ದು. ಹೆಚ್ಚಿನ ಅನುದಾನವನ್ನು ಕೊಡಿಸುವುದಕ್ಕೆ ಸರ್ಕಾರಕ್ಕೆ ಆಯೋಗವು ಶಿಫಾರಸ್ಸು ಮಾಡಬೇಕು ಎಂದರು.ಆಯೋಗದ ಸದಸ್ಯ ಅಮರನಾಥ್, ಸಮಾಲೋಚಕರಾದ ವಾರಂಬಳ್ಳಿ, ಆಪ್ತ ಕಾರ್ಯದರ್ಶಿ ಜಾಫರ್‍ಶರೀಫ್, ತಾಪಂ ಉಪಾಧ್ಯಕ್ಷೆ ತೀರ್ಥಮ್ಮ, ಪುರಸಭೈ ಅಧ್ಯಕ್ಷೆ ಮುದ್ದಮ್ಮ, ಉಪಾಧ್ಯಕ್ಷ ಕುಮಾರಸ್ವಾಮಿ ಇನ್ನಿತರರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin