ಅನುಮತಿ ಪಡೆಯದೆ ಶೌಚಾಲಯಕ್ಕೆ ಹೋಗಿದ್ದ ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಥಳಿಸಿದ ಶಿಕ್ಷಕಿ

ಈ ಸುದ್ದಿಯನ್ನು ಶೇರ್ ಮಾಡಿ

Basunde

ಹಲಿಯಾಳ,ಆ.27- ಅನುಮತಿ ಪಡೆಯದೆ ಶೌಚಾಲಯಕ್ಕೆ ಹೋಗಿದ್ದಕ್ಕೆ ವಿದ್ಯಾರ್ಥಿಗೆ ಶಿಕ್ಷಕಿಯೊಬ್ಬರು ಬಾಸುಂಡೆ ಬರುವಂತೆ ಥಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ತಾಲ್ಲೂಕಿನ ಸಾತ್ನಾಳ್ಳಿ ಗ್ರಾಮದಲ್ಲಿ ನಡೆದಿದೆ.   ಒಂದನೇ ತರಗತಿ ಓದುತ್ತಿರುವ ಸೋಮನಾಥ್ ಶಿಕ್ಷಕಿಯಿಂದ ಥಳಿತಕ್ಕೊಳಗಾದ ವಿದ್ಯಾರ್ಥಿ.  ಸೋಮನಾಥ್ ಮೂತ್ರ ವಿಸರ್ಜನೆಗೆಂದು ಶೌಚಾಲಯಕ್ಕೆ ಹೋಗಿಬಂದಿದ್ದು, ಇದರಿಂದ ಕೋಪಗೊಂಡ ಶಿಕ್ಷಕಿ ಸ್ನೇಹಲತಾ ತನ್ನ ಅಪ್ಪಣೆ ಇಲ್ಲದೆ ತರಗತಿಯಿಂದ ಹೊರ ಹೋಗಿದ್ದೀಯ ಎಂದು ವಿದ್ಯಾರ್ಥಿಯನ್ನು ಥಳಿಸಿದ್ದಾರೆ.  ಮನೆಗೆ ಬಂದ ಬಾಲಕ ಕೂಡಲೇ ತನ್ನ ತಂದೆತಾಯಿಗೆ ಶಿಕ್ಷಕಿ ಹೊಡೆದ ವಿಷಯವನ್ನು ತಿಳಿಸಿದ್ದು, ಮಗುವಿನ ಮೈಮೇಲಿರುವ ಬಾಸುಂಡೆ ಕಂಡು ಬೇಸರಗೊಂಡ ತಂದೆತಾಯಿ ಶಾಲೆಗೆ ಧಾವಿಸಿ ಶಾಲಾ ಮಂಡಳಿಗೆ ವಿಷಯ ಮುಟ್ಟಿಸಿದ್ದಾರೆ. ಅಲ್ಲದೆ ಶಿಕ್ಷಕಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ವಿದ್ಯಾರ್ಥಿಯ ತಂದೆ ರೊಹರಾತ್ ಚವ್ಹಾಣ್ ಹಲಿಯಾಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin