ಅನುರಾಗ್ ತಿವಾರಿ ಸಾವು ಸಹಜ ಸಾವಲ್ಲ ಕೊಲೆ..! : ಪ್ರಕರಣಕ್ಕೆ ಈಗ ಹೊಸ ಟ್ವಿಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Anurag-Tiwari--01

ಲಖ್ನೋ/ಬೆಂಗಳೂರು,ಮೇ 24- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ನಿಗೂಢ ಸಾವು ಪ್ರಕರಣ ದಿನಕ್ಕೊಂದು ಸ್ವರೂಪ ಪಡೆಯುತ್ತಿದೆ. ತಿವಾರಿ ಮೇಲೆ ಹಲ್ಲೆ ನಡೆಸಿ ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ಶವ ಪರೀಕ್ಷೆ ವರದಿ ಸಾಬೀತು ಮಾಡಿದ್ದು , ಅವರ ಸಾವು ಸಹಜವಲ್ಲ. ಹತ್ಯೆ ಎಂಬುದೂ ದೃಢಪಟ್ಟಿದೆ.  ಲಖ್ನೋ ಜಿಲ್ಲಾ ಆಸ್ಪತ್ರೆಯ ವೈದ್ಯ ತಂಡದಿಂದ ತಿವಾರಿ ಅವರ ಮರಣೋತ್ತರ ಪರೀಕ್ಷೆ ವರದಿ ಸಲ್ಲಿಕೆಯಾಗಿದ್ದು, ರಾಜಕೀಯ ಮತ್ತು ಐಎಎಸ್ ಅಧಿಕಾರಿಗಳ ವಲಯದಲ್ಲಿ ತಲ್ಲಣ ಉಂಟು ಮಾಡಿದೆ.ತಿವಾರಿ ಅವರ ಶವ ಪರೀಕ್ಷೆ ವರದಿ ಉತ್ತರಪ್ರದೇಶ ಸರ್ಕಾರದ ಕೈ ಸೇರಿದ್ದು , ಅವರ ಮೇಲೆ ನಡೆದಿರುವ ಹಲ್ಲೆ ಹಾಗೂ ಶರೀರದ ಕೆಲವು ಭಾಗಗಳಲ್ಲಿ ಗಾಯಗಳಾಗಿರುವುದನ್ನು ವರದಿ ದೃಢಪಡಿಸಿದೆ. ಅಲ್ಲದೆ ಐಎಎಸ್ ಅಧಿಕಾರಿ ಸಾವಿಗೂ ಮುನ್ನವೇ ಅವರ ದೇಹದ ಮೇಲೆ ಗಾಯಗಳಾಗಿತ್ತು.
ದೇಹದ ಆರು ಕಡೆ, ಮುಖದ ಮೇಲೆ ಮೂರು ಕಡೆ ಗಾಯಗಳಾಗಿವೆ ಎಂಬುದು ಶವ ಪರೀಕ್ಷೆಯಿಂದ ಮೃತಪಟ್ಟಿದೆ. ಅವರ ಸಾವು ಸಹಜವಲ್ಲ. ಹಲ್ಲೆ ಮತ್ತು ಉಸಿರುಗಟ್ಟಿಸಿ ನಡೆಸಿರುವ ಕೊಲೆಯಾಗಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಉತ್ತರಪ್ರದೇಶ ಮತ್ತು ಕರ್ನಾಟಕ ಸರ್ಕಾರಕ್ಕೆ ಕಗ್ಗಂಟಾಗಿರುವ ತಿವಾರಿ ನಿಗೂಢ ಸಾವಿನ ಪ್ರಕರಣದ ಬಗ್ಗೆ ಹಲವಾರು ಸಂಶಯಾಸ್ಪದ ಸುದ್ದಿಗಳು ಕೇಳಿ ಬಂದಿರುವ ಬೆನ್ನಲ್ಲೇ ಶವ ಪರೀಕ್ಷೆ ವರದಿಯು ಈ ಪ್ರಕರಣವನ್ನು ಮತ್ತಷ್ಟು ಕುತೂಹಲದತ್ತ ಕೊಂಡೊಯ್ದಿದೆ.  ಶವ ಪರೀಕ್ಷೆ ವರದಿಯನ್ನು ಆಧರಿಸಿ ಪೆÇಲೀಸರು ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ.   ಅನುರಾಗ್ ತಿವಾರಿ ಸಾವಿನ ಹಿಂದೆ ಐಎಎಸ್ ಮಾಫಿಯಾ ಕೈವಾಡವಿದ್ದು , ಸಾಕ್ಷ್ಯಾಧಾರಗಳನ್ನು ತಿರುಚುವ ಸಾಮಥ್ರ್ಯ ಕೂಡ ಅತ್ಯಂತ ಪ್ರಭಾವಿಗಳಿಗೆ ಇದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್.ವಿಜಯಕುಮಾರ್ ಸಂಶಯ ವ್ಯಕ್ತಪಡಿಸಿದ ಬೆನ್ನಲ್ಲೇ ಶವ ಪರೀಕ್ಷಾ ವರದಿಯೂ ಹೊರಬಿದ್ದಿರುವುದು ಈ ಪ್ರಕರಣವನ್ನು ಮತ್ತಷ್ಟು ಕಗ್ಗಂಟಾಗಿಸಿದೆ.

ತಿವಾರಿ ಸಾವಿನ ಸಂಬಂಧ ಈಗಾಗಲೇ ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಉತ್ತರಪ್ರದೇಶದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿರುವ ವಿಜಯಕುಮಾರ್, ತಿವಾರಿ ಸಾವಿನ ಹಿಂದೆ ಭ್ರಷ್ಟ ಮತ್ತು ಅತ್ಯಂತ ಪ್ರಭಾವಿ ಐಎಎಸ್ ಮಾಫಿಯಾ ಕೈವಾಡ ಇದೆ. ಇಂಥ ದುಷ್ಟರಿಂದ ರಾಜ್ಯದಲ್ಲಿ ನಿಷ್ಠಾವಂತರು ಕೆಲಸ ಅಥವಾ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಸಂಶಯ ವ್ಯಕ್ತಪಡಿಸಿದರು.ಸಿಬಿಐ ತನಿಖೆಯನ್ನೇ ಈ ಮಾಫಿಯಾ ತಪ್ಪು ದಾರಿಗೆ ಎಳೆಯುವ ಸಾಧ್ಯತೆ ಇದ್ದು , ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಅವರು ಉತ್ತರ ಪ್ರದೇಶ ಸರ್ಕಾರವನ್ನು ಒತ್ತಾಯಿಸಿದ್ದರು.   ಅನುರಾಗ್ ತಿವಾರಿ 150 ಕೋಟಿ ರೂ. ಮೌಲ್ಯದ ಕೊಮ್ಯಾಟ್ ಹಗರಣ ಪತ್ತೆಹಚ್ಚಿದ್ದರೆಂಬ ಸುದ್ದಿಗಳೂ ಇವೆ. ಪಡಿತರ ವ್ಯವಸ್ಥೆ ಗಣಕೀಕರಣಕ್ಕೆ ಸಂಬಂಧಪಟ್ಟಂತೆ ಸಂಸ್ಥೆಯೊಂದಕ್ಕೆ ಟೆಂಡರ್ ಹಂಚಿಕೆಯಲ್ಲಿ ಭಾರೀ ಅವ್ಯವಹಾರ ಆಗಿದೆ ಎಂಬ ಆರೋಪಗಳ ಸಂಬಂಧ ತಿವಾರಿ ವಿಧಾನಮಂಡಲ ಸಾರ್ವಜನಿಕ ಅರ್ಜಿಗಳ ಸಮಿತಿಗೆ ಮಾಹಿತಿ ನೀಡಲು ಸಿದ್ದತೆಗಳನ್ನು ನಡೆಸಿದ್ದರು. ಅಲ್ಲದೆ ಲೆಕ್ಕಪರಿಶೋಧನ ನಿಯಂತ್ರಕರು ಮತ್ತು ಮಹಾಲೇಖ ಪಾಲಕರು(ಸಿಎಜಿ ) ವರದಿ ಆಧರಿಸಿ ಈ ಟೆಂಡರ್‍ನ ತನಿಖೆಯನ್ನೂ ನಡೆಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಈ ಹಿನ್ನೆಲೆಯಲ್ಲಿ ಅವರಿಗೆ ಜೀವ ಭಯ ಇತ್ತು ಎಂಬ ಬಗ್ಗೆ ವರದಿಗಳೂ ಸಹ ಇವೆ. ಒಟ್ಟಾರೆ ತಿವಾರಿ ನಿಗೂಢ ಸಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು , ನಿಷ್ಪಕ್ಷಪಾತ ತನಿಖೆ ನಂತರವೇ ಸತ್ಯಾಂಶ ಹೊರಬೀಳಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin