ಅನುಷ್ಕಾ-ಕತ್ರೀನಾಳನ್ನು ಹೊಗಳಿದ ದೀಪಿಕಾ

ಈ ಸುದ್ದಿಯನ್ನು ಶೇರ್ ಮಾಡಿ

DEEPIKA

ಬಿ-ಟೌನ್ ಬೆಡಗಿಯರಾದ ಕಟ್ರಿನಾ ಕೈಫ್ ಮತ್ತು ಅನುಷ್ಕಾ ಶರ್ಮ, ಕಾಫಿ ವಿತ್ ಕರ್ ಟಾಕ್ ಶೋನಲ್ಲಿ ಒಟ್ಟಿಗೆ ಪಾಲ್ಗೊಂಡು ಸಾಕಷ್ಟು ಸುದ್ದಿಯ ಸದ್ದು ಮಾಡಿದ್ದರು. ಅಲ್ಲದೇ ವೀಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ತಮ್ಮ ಬದುಕಿನ ಹಾಸ್ಯ ಪ್ರಸಂಗಗಳು ಮತ್ತು ತುಂಟಾಟಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದ ಅನು ಮತ್ತು ಕ್ಯಾಟ್ ಈ ಶೋಗೆ ವಿಶೇಷ ಮೆರಗು ನೀಡಿದ್ದು ಈಗ ಹಳೆ ಸುದ್ದಿ. ಹೊಸ ಸುದ್ದಿ ಏನೆಂದರೆ ಬಾಲಿವುಡ್ ಸಾಮ್ರಾಜ್ಞಿಯಾಗಿರುವ ದೀಪಿಕಾ ಪಡುಕೋಣೆ ತನ್ನ ಸಮಕಾಲೀನರಾದ ಈ ತಾರೆಯರ ಬಗ್ಗೆ ಪ್ರತಿಕ್ರಿಯೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.
ಡಿಪ್ಪಿ ಯಾರನ್ನೂ ಅಷ್ಟು ಸುಲಭವಾಗಿ ಹೊಗಳುವುದಿಲ್ಲ.

ಯಾವ ನಟಿಯರನ್ನು ಪ್ರಶಂಸಿಸುವುದಿಲ್ಲ. ಆದರೆ ಈಗ ಅನು ಮತ್ತು ಕ್ಯಾಟ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವುದು ಬಿ-ಟೌನ್ ಹುಬ್ಬೇರುವಂತೆ ಮಾಡಿದೆ. ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಈ ನಟಿದ್ವಯರ ಬಗ್ಗೆ ದೀಪಿಕಾ ಟ್ವೀಟರ್‍ನಲ್ಲಿ ವಿಮರ್ಶೆ ಮಾಡಿದ್ದಾಳೆ. ಈ ಇಬ್ಬರು ಹುಡುಗಿಯರು ಚಿನಕುರಳಿ ಪಟಾಕಿಯಂತೆ ಶೋನಲ್ಲಿ ಮಾತನಾಡಿದರು. ಉತ್ತಮ ಮನರಂಜನೆ ನೀಡಿದರು. ಈ ಎಪಿಸೋಡ್ ನನಗೆ ತುಂಬಾ ಇಷ್ಟವಾಯಿತು ಎಂದು ಡಿಪ್ಪಿ ಹೇಳಿದ್ದಾಳೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin