ಅನುಷ್ಕಾ ಮತ್ತು ರಣಬೀರ್’ಗೆ ತಟ್ಟಿದ ಪ್ರತಿಭಟನೆ ಬಿಸಿ..!

ಈ ಸುದ್ದಿಯನ್ನು ಶೇರ್ ಮಾಡಿ

Ranbhir
ಬಾಲಿವುಡ್‍ನ ಹ್ಯಾಂಡ್‍ಸಮ್ ನಟ ರಣಬೀರ್ ಕಪೂರ್ ಮತ್ತು ಮಿಲ್ಕಿ ಬ್ಯೂಟಿ ಅನುಷ್ಕಾ ಶರ್ಮ ಪ್ರತಿಭಟನೆ ಎದುರಿಸಿದ ಪ್ರಸಂಗ ನಡೆದಿದೆ. ದೀಪಾವಳಿ ಪ್ರಯುಕ್ತ ಅಯಿ ದಿಲ್ ಹೈ ಮುಷ್ಕಿಲ್ ಫಿಲ್ಮ್ ಪ್ರಮೋಷನ್‍ಗಾಗಿ ನಾಲ್ಕು ರಾಜ್ಯಗಳಲ್ಲಿ ಈ ಜೋಡಿ ಭೇಟಿ ನೀಡಿದ್ದ ಸಂದರ್ಭವದು. ಭಜರಂಗದಳ ಮತ್ತಿತರ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ಅನು-ರಣ್‍ಗೆ ಪ್ರತಿಭಟನೆ ಸ್ವಾಗತ ಲಭಿಸಿತು.

ಕಾರಣ: ಈ ಸಿನಿಮಾದಲ್ಲಿ ಪಾಕಿಸ್ತಾನದ ತಾರೆ ಫವದ್ ಖಾನ್ ನಟಿಸಿದ್ದಾರೆ ಎಂಬುದು.  ಕಪೂರ್ ಮತ್ತು ಅನು ಚಂಡಿಗಢ, ದೆಹಲಿ, ಅಹಮದಾಬಾದ್ ಮತ್ತು ಮುಂಬೈಗಳಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡು ಅಭಿಮಾನಿಗಳ ಜೊತೆ ಸಂಭ್ರಮದಿಂದ ದೀಪಾವಳಿ ಆಚರಿಸಿದರು. ಆದರೆ ಈ ಸಿನಿಮಾದಲ್ಲಿ ಫವದ್ ಖಾನ್‍ಗೆ ಅವಕಾಶ ನೀಡಿರುವುದನ್ನು ಖಂಡಿಸಿ ಇದೇ ವೇಳೆ ಭಜರಂಗ ದಳ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಎಡಿಎಚ್‍ಎಂ ಪ್ರರ್ದಶನಗೊಳ್ಳುತ್ತಿದ್ದ ಚಿತ್ರಮಂದಿರಗಳ ಬಳಿ ಜಮಾಯಿಸಿದ್ದ ಕಾರ್ಯಕರ್ತರು ಸಿನಿಮಾ ತಂಡದ ವಿರುದ್ಧ ಘೋಷಣೆ ಕೂಗಿ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಒತ್ತಾಯಿಸಿದರು.

ಚಿತ್ರ ಬಿಡುಗಡೆ ಸಂದರ್ಭದಲ್ಲಿ ಪ್ರಮೋಷನ್ ಮಾಡುವ ಜೊತೆ ಅಭಿಮಾನಿಗಳೊಂದಿಗೆ ಕೆಲಕಾಲ ಬೆರೆತು ಅವರ ಮನಗೆಲ್ಲಬೇಕೆಂಬ ಈ ಜೋಡಿಯ ಉದ್ದೇಶಕ್ಕೆ ಭಂಗವಾಗಿದ್ದು ವಿಪರ್ಯಾಸ.  ಪಶ್ಚಿಮಬಂಗಾಳ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲೂ ಈ ಸಿನಿಮಾಗೆ ಹಿಂದು ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ ವ್ಯಕ್ತವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin