ಅನುಷ್ಕಾ ಶರ್ಮ ಈಗ ಪತ್ರಕರ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

anushka
ಬಿ-ಟೌನ್ ಪ್ರತಿಭಾನ್ವಿತ ತಾರೆ ಅನುಷ್ಕಾ ಶರ್ಮ ಈಗ ಪತ್ರಕರ್ತೆ. ಹೌದು ಹಿರಿಯ ನಟ ಸಂಜಯ್ ದತ್ ಕುರಿತು ನಿರ್ಮಾಣವಾಗಲಿರುವ ಬಯೋಪಿಕ್ (ಜೀವನಚರಿತ್ರೆ) ಸಿನಿಮಾದಲ್ಲಿ ಅನುಷ್ಕಾ ಪತ್ರಕರ್ತೆಯಾಗಲಿದ್ದಾಳೆ. ದಾದಾ ದತ್ ಪಾತ್ರದಲ್ಲಿ ರಣಬೀರ್ ಕಪೂರ್ ನಟಿಸುವುದು ನಿಕ್ಕಿಯಾಗಿದೆ. ಸಂಜಯ್ ದತ್‌ನ ಮೊದಲ ಪತ್ನಿ ರಿಚಾ ಶರ್ಮ ಅಥವಾ ಮತ್ತೊರ್ವ ಮಡದಿ ಮಾನ್ಯತಾ ಪಾತ್ರವನ್ನು ಅನುಷ್ಕಾ ನಿರ್ವಹಿಸುತ್ತಾಳೆ ಎಂಬ ರೂಮರ್‌ಗಳು ಹಬ್ಬಿದ್ದವು. ಆದರೆ ಈ ಎರಡೂ ಪಾತ್ರಗಳ ಬದಲಿಗೆ ಅನು ಈ ಸಿನಿಮಾದಲ್ಲಿ ಪತ್ರಕರ್ತೆಯಾಗಿ ನಟಿಸಲಿದ್ದಾಳೆ. ರಾಜಕುಮಾರ್ ಹಿರಾನಿ ಈ ಸಿನಿಮಾದ ಆಕ್ಷನ್-ಕಟ್ ಹೊಣೆ ಹೊತ್ತಿದ್ದಾರೆ. ಅಮಿರ್‌ಖಾನ್ ಅಭಿನಯದ ಸೂಪರ್ ಹಿಟ್ ಪಿಕೆ ಸಿನಿಮಾವನ್ನು ನಿರ್ದೇಶಿಸಿದ್ದ ಹಿರಾನಿ ಈಗಾಗಲೇ ಅನುಷ್ಕಾ ಜೊತೆ ಸಮಾಲೋಚನೆ ಮಾಡಿದ್ದು, ಜರ್ನಲಿಸ್ಟ್ ಪಾತ್ರಕ್ಕೆ ಒಪ್ಪಿದ್ದಾಳೆ.

1993ರ ಮುಂಬೈ ಸರಣಿ ಸೋಟದ ನಂತರ ಸಂಜಯ್ ದತ್ ಹೆಸರು ಕುಖ್ಯಾತಿ ಪಡೆದಿತ್ತು. ಎಕೆ-47 ರೈಫಲ್ ಹೊಂದಿದ್ದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ದತ್ ಜೀವನದಲ್ಲಿ ಏರುಳಿತ ಕಂಡ ಅಭಿನೇತ. ಈ ಎಲ್ಲ ಸಂಗತಿಗಳು ಅವರ ಬಯೋಪಿಕ್‌ನಲ್ಲಿ ಬಿಂಬಿತವಾಗಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin