ಅನೈತಿಕ ಸಂಬಂಧ : ಪ್ರಿಯತಮೆಯನ್ನು ಇರಿದು ಕೊಂದ ಪ್ರಿಯಕರ

ಈ ಸುದ್ದಿಯನ್ನು ಶೇರ್ ಮಾಡಿ

Women-Murder
ದಾಬಸ್‍ಪೇಟೆ, ಸೆ.2- ವಿವಾಹಿತ ಮಹಿಳೆಗೆ ಪ್ರಿಯಕರನೊಬ್ಬ ಚಾಕುವಿನಿಂದ ಯದ್ವಾತದ್ವ ಇರಿದು ಕೊಲೆ ಮಾಡಿರುವ ಘಟನೆ ಶಿವಗಂಗೆ ಬೆಟ್ಟದ ಹಿಂಭಾಗದ ಮೈಥಿಲೇಶ್ವರ ಸ್ವಾಮಿತೀರ್ಥದ ಬಳಿ ನಿನ್ನೆ ನಡೆದಿದೆ. ಶಿವಗಂಗೆಯ ಮುನಿರತ್ನಮ್ಮ (28) ಕೊಲೆಯಾದವರು. ಕಂಬಾಳು ಗ್ರಾಮದ ಶಶಿಕುಮಾರ್ (28) ಕೊಲೆ ಆರೋಪಿಯಾಗಿದ್ದಾನೆ.

ಮುನಿರತ್ನಮ್ಮ ಅವರಿಗೆ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಕೊಲೆಯಾದ ಮುನಿರತ್ನಮ್ಮ ಅವರ ತಮ್ಮ ಚೇತನ್ ಹಾಗೂ ಶಶಿಕುಮಾರ್ ಪರಸ್ಪರ ಸ್ನೇಹಿತರು. ಈ ಹಿನ್ನೆಲೆಯಲ್ಲಿ ಅವರ ಮನೆಗೆ ಬಂದು ಹೋಗುತ್ತಿದ್ದ ಶಶಿಕುಕುಮರ್ ಅವರಿಗೆ ಮುನಿರತ್ನಮ್ಮ ಅವರಲ್ಲಿ ಪ್ರೇಮಾಂಕುರವಾಗಿದೆ. ಆಗಾಗ್ಗ ಅವರ ಮನೆಗೆ ಬಂದು ಹೋಗುತ್ತಿದ್ದ ಎನ್ನಲಾಗಿದೆ.

ಕಳೆದ ಮೂರು ದಿನಗಳಿಂದ ಮುನಿರತ್ನಮ್ಮ ಅವರ ಮನೆಯಲ್ಲಿಯೇ ವಾಸವಿದ್ದ ಶಶಿಕುಮಾರ್, ನಿನ್ನೆ ಮುನಿರತ್ನಮ್ಮ ಅವರೊಂದಿಗೆ ಶಿವಗಂಗೆ ಬೆಟ್ಟದ ಹಿಂಭಾಗದ ಮೈಥಿಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.ಈ ಸಂದರ್ಭದಲ್ಲಿ ಇಬ್ಬರ ನಡುವಿನ ಅನೈತಿಕ ಸಂಬಂಧದ ವಿಷಯದಲ್ಲಿ ಮನಸ್ತಾಪ ಉಂಟಾಗಿ ಪರಸ್ಪರ ಮಾತಿಗೆ ಮಾತು ಬೆಳೆದಿದೆ. ಆಗ ಉಂಟಾದ ಜಗಳ ವಿಕೋಪಕ್ಕೆ ತಿರುಗಿದಾಗ ಶಶಿಕುಮಾರ್ ತನ್ನಲ್ಲಿದ್ದ ಚಾಕುವಿನಿಂದ ಮುನಿರತ್ನಮ್ಮ ಅವರಿಗೆ ಇರಿದು ಪರಾರಿಯಾಗಿದ್ದಾನೆ. ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ದಾಬಸಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿ ಆರೋಪಿ ಶಶಿಕುಮಾರ್‍ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Facebook Comments

Sri Raghav

Admin