ಅನ್ನದಾತರ ಹಿತವೇ ಮುಖ್ಯ ಧ್ಯೇಯವಾಗಿರಲಿ : ಸಿದ್ದುಗೆ ಗೌಡರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

Devegowda

ಬೆಂಗಳೂರು, ಆ.7- ಜೀವಜಲಕ್ಕಾಗಿ ಕಳೆದ ಒಂದೂವರೆ ವರ್ಷದಿಂದ ಶಾಂತಿಯಿಂದ ಹೋರಾಡುತ್ತಿರುವ ಅನ್ನದಾತರ ಹಿತವೇ ನಮ್ಮೆಲ್ಲರ ಮುಖ್ಯ ಧ್ಯೇಯವಾಗಿರಬೇಕು. ಜೈಲಿನಲ್ಲಿ ಸಂಕಷ್ಟ ಅನುಭವಿಸುತ್ತಿರುವ ರೈತ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸುವ ಬಗ್ಗೆ ತುರ್ತುಕ್ರಮ ಕೈಗೊಳ್ಳುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಿದ್ದಾರೆ.  ಕಳಸಾ ಬಂಡೂರಿ ಯೋಜನೆ, ಮಹದಾಯಿ ಕುರಿತಂತೆ ನಡೆದ ಸಭೆಯಲ್ಲಿ  ತಾವು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಅತೀ ಮಹತ್ವವಾದ ಈ ಸಭೆಯಲ್ಲಿ ಪಾಲ್ಗೊಳ್ಳಲಾಗಿಲ್ಲ. ಆದರೆ,ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಪಕ್ಷ ರಾಜಕೀಯ ಬದಿಗೊತ್ತಿ ನೊಂದ ರೈತರ ಕಣ್ಣೀರು ಒರೆಸುವುದಷ್ಟೆ ನಮ್ಮ ಆದ್ಯತೆಯಾಗಬೇಕು ಎಂದು ಹೇಳಿದ್ದಾರೆ.

ಪ್ರಸ್ತುತ ಉದ್ಭವಿಸಿರುವ ಕ್ಲಿಷ್ಟ ಪರಿಸ್ಥಿತಿಯನ್ನು ಮನಗಂಡು ರಾಜಕೀಯ ಮುಖಂಡರು, ಕಾನೂನು ಸಲಹೆಗಾರರು ಹಾಗೂ ನೀರಾವರಿ ತಜ್ಞರ ಸಲಹೆ-ಸೂಚನೆ ಪಡೆದು ಸೂಕ್ತ ನಿರ್ಧಾರಕ್ಕೆ ಬರುವಂತೆ ಸೂಚಿಸಿದ್ದಾರೆ.  ಇದು ರಾಜ್ಯದ ರೈತರ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ತಡಮಾಡದೆ ಪ್ರಧಾನಮಂತ್ರಿಯವರಿಗೆ ಈ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಬೇಕು ಹಾಗೂ ಪರಿಹಾರಕ್ಕಾಗಿ ಒತ್ತಾಯಿಸಲು ಸರ್ವಪಕ್ಷಗಳ ಮುಖಂಡರ ನಿಯೋಗ ಕರೆದೊಯ್ಯಲು ಅಗತ್ಯ ಕ್ರಮ ಕೈಗೊಳ್ಳುವಿರೆಂದು ನಂಬಿದ್ದೇನೆ ಎಂದು ತಿಳಿಸಿದ್ದಾರೆ.

► Follow us on –  Facebook / Twitter  / Google+

ಡೌನ್ಲೋಡ್ ‘ಈ ಸಂಜೆ’ ಮೊಬೈಲ್  ಆಪ್ 

Facebook Comments

Sri Raghav

Admin