ಅನ್ನದಾಸೋಹಕ್ಕಿಂತ ಜ್ಞಾನದಾಸೋಹ ಬಹು ದೊಡ್ಡದು

ಈ ಸುದ್ದಿಯನ್ನು ಶೇರ್ ಮಾಡಿ

8

ಗಜೇಂದ್ರಗಡ,ಫೆ.8- ಹಸಿದವರ ಹೊಟ್ಟೆ ತುಂಬಿಸಲು ಅನ್ನದಾಸೋಹ ಮಾಡುವುದು ಸರ್ವೆ ಸಾಮಾನ್ಯ. ಆದರೆ ಹಸಿದ ಹೊಟ್ಟೆಯನ್ನು ಸ್ವತಃ ತುಂಬಿಸಿಕೊಳ್ಳುವಂತಹ ಶಕ್ತಿಯನ್ನು ತುಂಬುವ ಜ್ಞಾನದಾಸೋಹ ಬಹುದೊಡ್ಡದಾಗಿದೆ ಎಂದು ರೋಣ ತಾಲೂಕು ಕಸಾಪ ಅಧ್ಯಕ್ಷ ಐ.ಎ. ರೇವಡಿ ಹೇಳಿದರು.ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ವಾರ್ಷೀಕ ಸ್ನೇಹ ಸಮ್ಮೇಳನ ಹೊಂಗನಸು 2016-17ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭಕ್ಕೆ ಜ್ಯೋತಿ ಬೇಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.ಕಾಲೇಜ್ ಜೀವನದಲ್ಲಿ ಪ್ರಥಮ ಘಟ್ಟ ಹಾಗೂ ಅಂತಿಮ ಘಟ್ಟಗಳು ಬರುವುದು ನಿಶ್ಚಿತ, ಈ ಘಟ್ಟಗಳಲ್ಲಿ ನಾವು ಎನನ್ನು ಕಲಿತೆದ್ದೇವೆ ಹಾಗೂ ಎನೇಲ್ಲಾ ಸಾಧನೆಗಳನ್ನು ಮಾಡಿದ್ದೇವೆ ಅನ್ನುವುದು ನಮ್ಮ ಮುಂದಿನ ಜೀವನದ ದಿಕ್ಕನ್ನು ಸೂಚಿಸುತ್ತದೆ ಎಂದರು.

ನಮ್ಮ ದೇಶದಲ್ಲಿ ಶೇ.65ರಷ್ಟು ನಿರುದ್ಯೋಗಿ ಸಮಸ್ಯೆ ಎದ್ದು ಕಾಣುತ್ತಿದ್ದು, ಇದನ್ನು ಸಂಪೂರ್ಣ ಮಟ್ಟಹಾಕುವ ತಾಕತ್ತು ನಿಮ್ಮಂತಹ ಯುವ ವಿದ್ಯಾರ್ಥಿಗಳಲ್ಲಿ ಇದೆ. ಅದನ್ನು ಅರಿತು ತಾವು ಚೆನ್ನಾಗಿ ಓದಿ ದೇಶದ ಮತ್ತು ನಮ್ಮ ನಾಡಿನ ಪ್ರಗತಿಗಾಗಿ ದುಡಿಯುವ ಪ್ರಜೆಗಳಾಗಿ ಹೊರಹೊಮ್ಮಬೇಕಿದೆ. ನಗರದಲ್ಲಿ ಪ್ರಾರಂಭದ ವರ್ಷದಲ್ಲಿ ಕೇವಲ 103 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ ಆರಾಧ್ಯ ದೈವ ಅನ್ನದಾನ ಮಹಾಸ್ವಾಮಿಗಳ ಆರ್ಶೀವಾದದಿಂದ ಮತ್ತು ಶಿಕ್ಷಕರ ಕಠಿಣ ಪರಿಶ್ರಮದಿಂದ ಉತ್ತಮವಾದ ಫಲಿತಾಂಶಗಳನ್ನು ಕೊಡುವುದರ ಮೂಲಕ ಇಂದು 350ಕ್ಕಿಂತ ಅಧಿಕ ಮಕ್ಕಳು ಕಲೆಯುತ್ತಿದ್ದಾರೆ ಎನ್ನುವುದು ಶ್ಲಾಘನೀಯ ಎಂದು ಅವರು ಹೇಳಿದರು. ಕಾಲೇಜ್ ಚೇರಮನ್ ಎಸ್.ಕೆ. ರೇವಡಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾಕ್ರ್ಸ್‍ಕಾರ್ಡ್ ಅಷ್ಟೇ ಮುಖ್ಯವಲ್ಲ. ಅದರ ಜೊತೆಗೆ ಕಲಿತ ನಡೆ ನುಡಿ, ಮಧರ ನೆನಪುಗಳು ಸಹ ಬಹುಮುಖ್ಯವಾಗಿವೆ.

ವಿದ್ಯಾರ್ಥಿಗಳ ಜೀವನ ರೂಪಿಸುವುದು ಕೇವಲ ಶಿಕ್ಷಕರಿಂದ ಮಾತ್ರ ಸಾಧ್ಯವಾಗದು. ಪಾಲಕರು ಕೈಜೋಡಿಸಿ ತಮ್ಮ ಮಕ್ಕಳು ದಿನನಿತ್ಯ ಏನು ಮಾಡುತ್ತಿದ್ದಾರೆ, ಅವರ ಅಭ್ಯಾಸದ ಪ್ರಗತಿ ಯಾವ ಮಟ್ಟದಲ್ಲಿ ಇದೆ ಎಂಬುವುದನ್ನು ಸಹ ಗಮನಿಸಿ ಅದರ ಕುರಿತು ಕಾಲೇಜಿನ ಪ್ರಾಧ್ಯಪಕ ವೃಂದಕ್ಕೆ ತಿಳಿಸಬೇಕು. ಅದೇ ರೀತಿ ವಿದ್ಯಾರ್ಥಿಗಳಾದ ತಾವುಗಳೆಲ್ಲರು ನಿಷ್ಠಾವಂತರಾಗಿ ಓದಬೇಕು ಎಂದು ಅವರು ತಿಳಿದರು.ಇದೇ ಸಂದರ್ಭದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಿಸಲಾಯಿತು. ಕಾಲೇಜಿನ ಪ್ರಧಾನ ಕಾರ್ಯದರ್ಶಿ ಎಮ್.ಜಿ. ಸೋಮನಕಟ್ಟಿ, ಪುರಸಭೆ ಮುಖ್ಯಾಧಿಕಾರಿ ಹನಮಂತಮ್ಮ ನಾಯಕ, ಆಡಳಿತ ಮಂಡಳಿ ಸದಸ್ಯರಾದ ಎಮ್.ಪಿ. ಪಾಟೀಲ, ಪಿ.ಎನ್. ಚವಡಿ, ಪ್ರಾಚಾರ್ಯ ಬಸವರಾಜ ಸಿ. ಚಿನಿವಾಲರ, ಸಿಬ್ಬಂದಿಗಳಾದ ವಸಂತರಾವ ಗಾರಗಿ, ಬಿ.ಎಸ್. ಹೀರೆಮಠ, ವಿನಾಯಕ ಜಾಧವ, ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin