ಅನ್ನಭಾಗ್ಯದಿಂದ ಬಡವರ ಹಸಿವು ನೀಗಿಸಿದೆ, 3 ವರ್ಷದಲ್ಲಿ ಹಸಿವಿನಿಂದ ಒಬ್ಬರೂ ಸಾವನ್ನಪ್ಪಿಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಆ.16- ಮೂರ್ನಾಲ್ಕು ವರ್ಷಗಳಿಂದ ಬರದ ಭೀಕರತೆಗೆ ರಾಜ್ಯದ ಜನತೆ ತತ್ತರಿಸಿದ್ದಾರೆ. ಇಂತಹ ಸಂದರ್ಭ ನಾವು ಘೋಷಿಸಿದ ಅನ್ನ ಭಾಗ್ಯ ಬಡವರ ಹಸಿವನ್ನು ನೀಗಿಸಿದೆ.  ಕಳೆದ ಮೂರು ವರ್ಷಗಳಲ್ಲಿ ಜನ ಊರು ಬಿಟ್ಟು ಗುಳೆ ಹೋಗುವುದು ತಪ್ಪಿದೆ. ಕರ್ನಾಟಕದಲ್ಲಿ ಒಂದೇ ಒಂದು ಹಸಿವಿನಿಂದ ಸಾವನ್ನಪ್ಪಿರುವ ಉದಾಹರಣೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಂದಿರಾ ಕ್ಯಾಂಟೀನ್ ಉದ್ಘಾಟನೆಯ ನಂತರ ಮಾತನಾಡಿದ ಅವರು, ಹಸಿವಿನ ಸಂಕಟ ಅನುಭವಿಸಿದವನಿಗೇ ಗೊತ್ತು. ಹಾಗಾಗಿ ನಾವು ಬಡವರಿಗೆ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ. ಯಾವುದೇ ಉದ್ಯಾನ ಅಥವಾ ಇತರ ಕಡೆಗಳಲ್ಲಿ ಕ್ಯಾಂಟೀನ್ ತೆರೆದಿಲ್ಲ. ಬಿಬಿಎಂಪಿ ಜಾಗಗಳಲ್ಲಿ ಮಾತ್ರ ಮಾಡಲಾಗಿದೆ. ಅನಗತ್ಯವಾಗಿ ಈ ಬಗ್ಗೆ ಟೀಕೆ ಮಾಡುವವರಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಬಡವರಿಗೆ ಊಟ ಒದಗಿಸುವುದು ನಮ್ಮ ಸರ್ಕಾರದ ಬದ್ಧತೆ. ಆ ಬದ್ಧತೆಯಿಂದಲೇ ನಾವು ಬಡವರಿಗಾಗಿ ಈ ಕ್ಯಾಂಟೀನ್ ಆರಂಭಿಸಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು. ಸದ್ಯ 101 ಕ್ಯಾಂಟೀನ್ ಆರಂಭವಾಗಿವೆ. ಅಕ್ಟೋಬರ್ 2ರ ವೇಳೆಗೆ ಉಳಿದ 97 ಕ್ಯಾಂಟೀನ್‍ಗಳು ಕಾರ್ಯಾರಂಭಿಸಲಿವೆ. ಸದ್ಯದಲ್ಲಿಯೇ ಎಲ್ಲಾ ಜಿಲ್ಲೆಗಳಿಗೂ ಈ ಯೋಜನೆ ವಿಸ್ತರಿಸಲಾಗುವುದು ಎಂದು ಅವರು ಹೇಳಿದರು.

Facebook Comments

Sri Raghav

Admin