ಅನ್ನಭಾಗ್ಯ ಯೋಜನೆಯ ಅಕ್ಕಿಯಲ್ಲಿ ಕಲ್ಲು, ಸಿಮೆಂಟ್, ಗೊಬ್ಬರ…!

ಈ ಸುದ್ದಿಯನ್ನು ಶೇರ್ ಮಾಡಿ

Annabhagya--01

ಬೇಲೂರು, ಜು.23- ರಾಜ್ಯ ಸರ್ಕಾರ ಬಡ ಜನರಿಗೆ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯನ್ನು ವಿತರಿಸುತ್ತಿದೆ. ಆದರೆ ಸಿಮೆಂಟ್, ಕಲ್ಲುಗಳು ಹಾಗೂ ಗೊಬ್ಬರ ಮಿಶ್ರಿತ ಅಕ್ಕಿಯನ್ನು ವಿತರಿಸುತ್ತಿರುವ ಘಟನೆ ತಾಲೂಕಿನ ಶೆಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ.ತಾಲೂಕಿನ ನಾರಾಯಣಪುರ ಗ್ರಾಪಂ ವ್ಯಪ್ತಿಯ ಶೆಟ್ಟಿಗೆರೆ ನ್ಯಾಯಾಬೆಲೆ ಅಂಗಡಿಯೊಂದ ರಲ್ಲಿ ಸರ್ಕಾರದಿಂದ ಬರುವ ಅನ್ನಭಾಗ್ಯ ಯೋಜನೆಯ ಪಡಿತರವನ್ನು ಗ್ರಾಮಸ್ಥರಿಗೆ ವಿತರಿಸುವ ಸಂದರ್ಭದಲ್ಲಿ ಅಕ್ಕಿಯೊಂದಿಗೆ ಸಿಮೆಂಟ್, ಕಲ್ಲು ಹಾಗೂ ಗೊಬ್ಬರ ಮಿಶ್ರಿತ ಅಕ್ಕಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ನ್ಯಾಯಬೆಲೆ ಅಂಗಡಿ ಮಾಲೀಕ ಗ್ರಾಮಸ್ಥರೊಂದಿಗೆ ಉಡಾಫೆಯಿಂದ ವರ್ತಿಸಿ ಮಿಶ್ರಿತ ಅಕ್ಕಿಯನ್ನು ವಾಪಸ್ ತೆಗೆದು ಕೊಳ್ಳದೆ, ಬೇಕಾದರೆ ಇದೇ ಅಕ್ಕಿಯನ್ನು ತೆಗೆದುಕೊಳ್ಳಿ ಎಂದಿದ್ದಾನೆ. ಈ ಬಗ್ಗೆ ಗ್ರಾಮಸ್ಥರು ಸಂಬಂದಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆ ಅಧಿಕಾರಿಗಳು ಈ ಅಕ್ಕಿ ಪರೀಕ್ಷೆಗೆ ಲ್ಯಾಬ್‍ಗೆ ಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ಶೆಟ್ಟಿಗೆರೆ ಗ್ರಾಮಸ್ಥರಾದ ರವಿ, ರಘು, ಮಂಜುನಾಥ್, ಗೋಪಾಲ್ ಹಾಗೂ ಗ್ರಾಮಸ್ಥರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin