ಅನ್ನಭಾಗ್ಯ ಯೋಜನೆಯ ಅಕ್ಕಿ ಪ್ರಮಾಣ 5 ರಿಂದ 7 ಕೆಜಿಗೆ ಏರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Anna-Bhagya--01

ಬೆಂಗಳೂರು, ಮಾ.15- ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ನೀಡುತ್ತಿರುವ 5 ಕೆಜಿ ಆಹಾರಧಾನ್ಯ ಪ್ರಮಾಣವನ್ನು 7ಕೆಜಿಗೆ ರಾಜ್ಯ ಸರ್ಕಾರ ಹೆಚ್ಚಳ ಮಾಡಿದೆ.   ಜನರ ಬೇಡಿಕೆಯಂತೆ 5ಕೆಜಿಯಿಂದ 7ಕೆಜಿವರೆಗೆ ಅಕ್ಕಿ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದು. ರಾಜ್ಯವನ್ನು ಹಸಿವುಮುಕ್ತ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದಾರೆ.  ಅನ್ನಭಾಗ್ಯ ಯೋಜನೆಯಿಂದ ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಬೇಕೆಂಬ ಸರ್ಕಾರದ ಕನಸು ಈಡೇರುವತ್ತ ಮುನ್ನುಗ್ಗಿದೆ. ಬಡತನ ರೇಖೆಗಿಂತ ಕೆಳಗಿರುವ ಸುಮಾರು 1.08 ಕುಟುಂಬಗಳು ಇದರ ಲಾಭ ಪಡೆಯುತ್ತಿವೆ ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಸಕ್ತ ಸಾಲಿನಲ್ಲಿ ಬಿಪಿಎಲ್ ಕುಟುಂಬಗಳಿಗೆ ನೀಡುತ್ತಿರುವ ಆಹಾರ ಧಾನ್ಯಗಳಲ್ಲಿ ಪೌಷ್ಠಿಕಾಂಶ ಮತ್ತು ಪ್ರೊಟೀನ್‍ಗಳು ದೊರೆಯುವುದನ್ನು ಖಾತರಿಪಡಿಸಲು ಇನ್ನು ಮುಂದೆ ಕಾರ್ಡ್‍ದಾರರಿಗೆ 1ಕೆಜಿ ಬೇಳೆ ನೀಡುವುದನ್ನು ಮುಂದಿನ ತಿಂಗಳಿನಿಂದಲೇ ಜಾರಿ ಮಾಡುವುದಾಗಿ ಘೋಷಣೆ ಮಾಡಿದರು.
ಪಡಿತರ ವ್ಯವಸ್ಥೆಯಿಂದ ಸುಮಾರು 20 ಲಕ್ಷ ಬಡ ಕುಟುಂಬಗಳನ್ನು ಅನ್ನಭಾಗ್ಯ ಯೋಜನೆ ವ್ಯಾಪ್ತಿಗೆ ತರಲಾಗಿದೆ. ಹೊಸ ಪಡಿತರ ಚೀಟಿ ವಿತರಣೆಯನ್ನು ಸಕಾಲ ಯೋಜನೆಯಡಿ ತಂದಿರುವ ಕಾರಣ 15 ದಿನಗಳೊಳಗೆ ಅರ್ಜಿದಾರರ ಮನೆ ಬಾಗಿಲಿಗೆ ಸ್ಪೀಡ್‍ಪೋಸ್ಟ್ ಮೂಲಕ ಕಾರ್ಡ್‍ಗಳನ್ನು ವಿತರಣೆ ಮಾಡುವುದಾಗಿ ತಿಳಿಸಿದರು.
ನಾರಿನಿಕೇತನ, ವೃದ್ಧಾಶ್ರಮ, ಅನ್ನ ಮಕ್ಕಳ ಶಾಲೆ, ಬಡ ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯ, ಭಿಕ್ಷುಕರ ಪುನರ್ವಸತಿ ಕೇಂದ್ರ ಸೇರಿದಂತೆ ಅನ್ನಭಾಗ್ಯ ಮಾದರಿಯಲ್ಲಿ ಇವುಗಳಿಗೆ ಆಹಾರಧಾನ್ಯವನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ.  ಅನಿಲ ರಹಿತ ಬಡ ಕುಟುಂಬಗಳಿಗೆ ಉಚಿತವಾಗಿ ಅನಿಲ ಸಂಪರ್ಕ ಒದಗಿಸಲು ಹಾಗೂ ರಾಜ್ಯವನ್ನು ಸೀಮೆಎಣ್ಣೆ ಮುಕ್ತಗೊಳಿಸಲಾಗುವುದು. ಅನಿಲಭಾಗ್ಯ ಯೋಜನೆಯಡಿ 5 ಲಕ್ಷ ಅರ್ಹ ಬಡ ಕುಟುಂಬಗಳಿಗೆ 1600 ಸಹಾಯಧನದಲ್ಲಿ ಅನಿಲಭಾಗ್ಯ ಹೊಂದಿದ ಗ್ರಾಮೀಣ ಪ್ರದೇಶದ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ಅಥವಾ ಉಚಿತವಾಗಿ ರೀಚಾರ್ಜಬಲ್ ಎಲ್‍ಇಡಿ ಸೆಟ್‍ಗಳನ್ನು ಆಯ್ಕೆ ಮಾಡಲಾಗುವ ಅವಕಾಶ ನೀಡಲಾಗಿದೆ.

ನ್ಯಾಯಬೆಲೆ ಅಂಗಡಿ ಮಟ್ಟದ ಜಾಗೃತ ಸಮಿತಿಗಳನ್ನು ಸದೃಢಗೊಳಿಸಿ ಲೆಕ್ಕ ಪರಿಶೋಧನೆ, ಇ-ಆಡಳಿತ ಇಲಾಖೆಯೊಂದಿಗೆ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಸೇವಾಸಿಂಧು ಕೇಂದ್ರಗಳ ಪರಿವರ್ತನೆ, ಗ್ರಾಹಕ ವ್ಯಾಜ್ಯ ಪೀಠಗಳನ್ನು ಮೂರು ತಿಂಗಳ ಅವಧಿಯೊಳಗೆ ವಿಲೀನಗೊಳಿಸುವುದು ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  ಈ ಬಾರಿಯ ಬಜೆಟ್‍ನಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 3,636 ಕೋಟಿ ರೂ. ಅನುದಾನ ಒದಗಿಸಲಾಗಿದೆ.

[ ರಾಜ್ಯ ಬಜೆಟ್ 2017-18  (Live Updates) ]


< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin