ಅಪಘಾತಕ್ಕೀಡಾದವನ್ನು ರಕ್ಷಿಸಿದರೆ ಬಹುಮಾನ

ಈ ಸುದ್ದಿಯನ್ನು ಶೇರ್ ಮಾಡಿ

acci

ನವದೆಹಲಿ. ಆ.11 : ಅಪಘಾತಕ್ಕೆ ಈಡಾಗಿ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದವರನ್ನು ರಕ್ಷಿಸಲು ಮುಂದಾಗುವ ದೊಡ್ಡ ಮನಸ್ಸಿನವರು ನಮ್ಮ ಸಮಾಜದಲ್ಲಿ ಕಡಿಮೆಯೇ ಅನ್ನಬೇಕು. ಪೊಲೀಸ್ ವಿಚಾರಣೆ, ಸಾಕ್ಷ್ಯ, ಕೋರ್ಟ್ ಇವೆಲ್ಲ ರಗಳೆ ಎಂಬ ಕಾರಣವೇ ಇದಕ್ಕೆ ಮುಖ್ಯ ಕಾರಣ.  ನಿನ್ನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಅಪಘಾತದ ಘಟನೆಯೊಂದು ಸಂಪೂರ್ಣ ದೇಶವೇ ತಲೆತಗ್ಗಿಸುವಂತಿದೆ. ವ್ಯಕ್ತಿಯೊಬ್ಬರು ರಕ್ತದ ಮಡುವಿನಲ್ಲಿ 90 ನಿಮಿಷಗಳ ಕಾಲ ನರಳಾಡುತ್ತಿದ್ದರೂ ಯಾರು ಕೂಡ ಆತನ ಸಹಾಯಕ್ಕೆ ಧಾವಿಸಿಲ್ಲ. ಕೊನೆಗೆ ಪೊಲೀಸರೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಅದಾಗಲೇ ತೀವ್ರ ರಕ್ತಸ್ರಾವಕ್ಕೀಡಾಗಿದ್ದ ಆತ ಬದುಕುಳಿಯಲಿಲ್ಲ.

ಈ ಘಟನೆಯ ನಂತರ ಮಹತ್ವದ ನಿರ್ಧಾರಕ್ಕೆ ಬಂದಿರುವ ದೆಹಲಿ ಸರ್ಕಾರ, ಅಪಘಾತಕ್ಕೀಡಾಗಿರುವವರ ಸಹಾಯಕ್ಕೆ ಸದ್ಯದಲ್ಲಿಯೇ ಹೊಸ ಯೋಜನೆಯೊಂದನ್ನು ಘೋಷಿಸಲಿದೆ. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸುತ್ತಾರೋ ಅವರಿಗೆ ನೀಡಲಾಗುವುದು ಎಂದು ಸರ್ಕಾರ ಹೇಳಿದೆ.   ಯೋಜನೆಗೆ ಸಂಬಂಧಪಟ್ಟಂತೆ ಕರಡು ಸಿದ್ಧವಾಗುತ್ತಿದ್ದು ಈ ತಿಂಗಳಾಂತ್ಯದಲ್ಲಿ ಕರಡನ್ನು ಸಂಪುಟದಲ್ಲಿ ಮಂಡಿಸಿ ನಂತರ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ಒಪ್ಪಿಗೆಗೆ ಕಳುಹಿಸಿಕೊಡಲಾಗುವುದು ಎಂದು ದೆಹಲಿ ಗೃಹ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.

ಮೂಲತಃ ಪಶ್ಚಿಮ ಬಂಗಾಲದ, 35ರ ಹರೆಯದ ಸೆಕ್ಯುರಿಟಿ ಗಾರ್ಡ್ ಮತಿಬಲ್ ಎಂಬಾತ ನಿನ್ನೆ ನಸುಕಿನ ವೇಳೆ ತನ್ನ ಕರ್ತವ್ಯ ಮುಗಿಸಿ ತಿಹಾರ್ ಗ್ರಾಮದಲ್ಲಿನ ತನ್ನ ಮನೆಗೆ ಮರಳುವ ವೇಳೆ ಡೆಲಿವರಿ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಗೆ ಉರುಳಿದ್ದಾನೆ. ಸುಮಾರು 90 ನಿಮಿಷಗಳ ಕಾಲ ಸಾವು- ಬದುಕಿನ ನಡುವೆ ಹೋರಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ಸೇರಿಸುವ ಬದಲು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾರೆ ಜನರು. ಅಷ್ಟೇ ಅಲ್ಲ ವ್ಯಕ್ತಿಯೊಬ್ಬ ಆತನ ಮೊಬೈಲ್ನ್ನು ಎತ್ತಿಕೊಂಡು ಹೋಗಿದ್ದಾನೆ.

► Follow us on –  Facebook / Twitter  / Google+

Facebook Comments

Sri Raghav

Admin