ಅಪಘಾತಕ್ಕೀಡಾದ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಕಾರು

ಈ ಸುದ್ದಿಯನ್ನು ಶೇರ್ ಮಾಡಿ

Prajwal-Revanna

ಆಗುಂಬೆ, ಜೂ.09: ಆಗುಂಬೆಯ ಘಾಟಿ ಸಮೀಪದ ಹೊಸಗದ್ದೆ ಬಳಿಯ ಬಿದರಗೋಡು ಬಳಿ ಜೆಡಿಎಸ್ ವರಿಷ್ಠ ದೇವೇಗೌಡರ ಮೊಮ್ಮಗ, ಎಚ್‍.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ಕಾರು ಅಪಘಾತಕ್ಕೀಡಾಗಿದೆ. ಆಗುಂಬೆಯಿಂದ ಶೃಂಗೇರಿಗೆ ಹೋಗುತ್ತಿದ್ದ ವೇಳೆ ಈ ಪಘಾತ ಸಂಭವಿಸಿದ್ದು ಪ್ರಜ್ವಲ್ ಅವರ ಸೋದರ ಸಂಬಂಧಿಗಳು ಹಾಗೂ ಕಾರಿನ ಚಾಲಕ ವಾಹನದಲ್ಲಿದ್ದರು ಎನ್ನಲಾಗಿದೆ. ಆದರೆ ಪ್ರಜ್ವಲ್ ಕಾರಿನಲ್ಲಿರಲಿಲ್ಲ ಎನ್ನಲಾಗಿದೆ.


ಪ್ರಜ್ವಲ್ ರೇವಣ್ಣ ಅವರ ಪಜೆರೋ ವಾಹನ ಹಾಗೂ ಟ್ಯಾಂಕರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಆದರೆ, ಪ್ರಜ್ವಲ್ ರೇವಣ್ಣ ಅವರು ಕಾರಿನಲ್ಲಿ ಪ್ರಯಾಣಿಸುತ್ತಿರಲಿಲ್ಲ ಎಂಬ ಸುದ್ದಿಯನ್ನು ಜೆಡಿಎಸ್ ಮೂಲಗಳು ಖಚಿತಪಡಿಸಿವೆ. ಈ ಮುಂಚೆ ಕಾರಿನಲ್ಲಿ ಪ್ರಜ್ವಲ್ ಅವರು ಪ್ರಯಾಣಿಸುತ್ತಿದ್ದರು ಎಂದು ಸುದ್ದಿ ಹಬ್ಬಿತ್ತು. ಆದರೆ, ಈಗ ಅಪಘಾತಕ್ಕೀಡಾದ ಸ್ಥಳವನ್ನು ಪರಿಶೀಲಿಸಿರುವ ಆಗುಂಬೆ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ನಂತರ ಮುಂದೆ ಸಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

 

Facebook Comments

Sri Raghav

Admin