ಅಪಘಾತದಿಂದ ಬಸ್’ಗೆ ಬೆಂಕಿಬಿದ್ದು 18 ಮಂದಿ ಸಜೀವ ದಹನ

ಈ ಸುದ್ದಿಯನ್ನು ಶೇರ್ ಮಾಡಿ

Bus-Accident

ರೋಮ್, ಜ.21-ಬಸ್ಸೊಂದು ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ 18 ಮಂದಿ ದುರಂತ ಸಾವಿಗೀಡಾದ ಘಟನೆ ಉತ್ತರ ಇಟಲಿಯಲ್ಲಿ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಇತರ 36 ಮಂದಿ ತೀವ್ರ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ ಟೆರೋನಾದ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ಸಿನಲ್ಲಿದ್ದ ಹಂಗೇರಿಯ 18 ಯುವಕರು ಮೃತಪಟ್ಟಿದ್ದಾರೆ. ಈ ದುರಂತದಲ್ಲಿ ಫ್ರೆಂಚ್ ಬಸ್ ಚಾಲಕ ಮತ್ತು ಆತನ ಕುಟುಂಬದ ಸದಸ್ಯರೂ ಅಸುನೀಗಿದ್ದಾರೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ. 50 ಜನರಿದ್ದ ಬಸ್ ಹೆದ್ದಾರಿಯಲ್ಲಿದ್ದ ಕಾವಲು ಗೋಪುರಕ್ಕೆ ಡಿಕ್ಕಿ ಹೊಡೆದು ಆನಂತರ ಬೆಂಕಿ ಹೊತ್ತಿಕೊಂಡು ಧಗಧಗ ಉರಿಯಿತು. ಕೆಲವೇ ಕ್ಷಣಗಳಲ್ಲಿ 18 ಮಂದಿ ಸಾವನ್ನಪ್ಪಿದರು ಎಂದು ಪ್ರತ್ಯಕ್ಷದರ್ಶಿ ವಾಹನ ಚಾಲಕನೊಬ್ಬ ತಿಳಿಸಿದ್ದಾನೆ. 36 ಗಾಯಾಳುಗಳ ಪೈಕಿ ಕೆಲವರ ಸ್ಥಿತಿ ಶೋಚನೀಯವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin