ಅಪಘಾತದ ವೇಳೆ ಜೀವಗಳನ್ನು ರಕ್ಷಿಸಲು ರಸ್ತೆಗಿಳಿದ 45 ‘ಬಸ್ ಮಿತ್ರ’ ಬೊಲೆರೋಗಳು

ಈ ಸುದ್ದಿಯನ್ನು ಶೇರ್ ಮಾಡಿ

Bus-Mitra--01

ಬೆಂಗಳೂರು,ನ.3-ಅಪಘಾತ ಸಂಭವಿಸಿದ ಕೂಡಲೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿ ಅವರ ಜೀವ ರಕ್ಷಿಸುವ ಸದ್ದುದೇಶಕ್ಕಾಗಿ ಸರ್ಕಾರವು 45 ಮಹೀಂದ್ರ ಬೊಲೆರೊ ವಾಹನಗಳನ್ನು ನೀಡಿದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ತಿಳಿಸಿದರು. ಶಾಂತಿನಗರದ ಕೆಎಸ್‍ಆರ್‍ಟಿಸಿ 4ನೇ ಘಟಕದಲ್ಲಿ ಹಮ್ಮಿಕೊಂಡಿದ್ದ ಅಪಘಾತ ಪರಿಹಾರ ನಿಧಿಯ ಬಸ್ ಮಿತ್ರ ವಾಹನಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೋಲ್ಡನ್ ಅವರ್ ಟ್ರಸ್ಟ್ ಮತ್ತು ಭಾರತೀಯ ರೆಡ್‍ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ಚಾಲನಾ ಸಿಬ್ಬಂದಿಗಳಿಗೆ ಹಾಗು ಪ್ರಯಾಣಿಕರಿಗೆ ಅಪಘಾತವಾದ ಸಂದರ್ಭದಲ್ಲಿ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡುವ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಪ್ರತಿದಿನ 8489 ವಾಹನಗಳಿಂದ 28.46 ಲಕ್ಷ ಕಿ.ಮೀ ಕ್ರಮಿಸಿ ಪ್ರತಿದಿನ 27 .28 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೌಲಭ್ಯ ಕಲ್ಪಿಸಲಾಗುತ್ತದೆ. ಪ್ರಸ್ತುತ ನಿಗಮದ ಅಪಘಾತದ ಪ್ರಮಾಣ ಪ್ರತಿ ಲಕ್ಷ ಕಿ.ಮೀಗೆ 0.19ರಷ್ಟಿದೆ. ಇದನ್ನು ಕಡಿಮೆಗೊಳಿಸುವ ಉದ್ದೇಶದಿಂದ ರಸ್ತೆ ಅಪಘಾತಗಳು ಸಂಭವಿಸಿದಾಗ ಕೂಡಲೇ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ತ್ವರಿತವಾಗಿ ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಿ ಗುಣಮಟ್ಟದ ಚಿಕಿತ್ಸೆಗೆ ಒಳಪಡಿಸಿ ಜೀವ ರಕ್ಷಿಸುವ ಉದ್ದೇಶಕ್ಕಾಗಿ 45 ಮಹೀಂದ್ರ ಬೊಲೆರೊ ವಾಹನಗಳನ್ನು 3.52 ಕೋಟಿ ರೂ.ಗೆ ಖರೀದಿಸಿ ನಿಗಮದ 16 ಡಿವಿಜನ್‍ಗಳಿಗೆ ನಿಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆ ¸ ಒದಗಿಸುವ ಸಲುವಾಗಿ ಹೊಸ ಹೊಸ ಮಾದರಿಯ ಬಸ್‍ಗಳನ್ನು ಪರಿಚಯಿಸುತ್ತಿದೆ ಎಂದರು.

Bus-Mitra--0--00

ಖಾಸಗಿ ಬಸ್‍ಗಳ ಆನ್‍ಲೈನ್ ಟಿಕೆಟ್ ಬುಕಿಂಗ್ ರದ್ದು ಮಾಡಲಾಗುತ್ತಿದೆ ಎಂಬುದು ವದಂತಿ ಅಂತಹ ಯಾವುದೇ ಪ್ರಸ್ತಾಪ ಇಲ್ಲ. ಸ್ಟೇಟ್‍ಗ್ಯಾರೇಜ್ ಬಳಸುವವರು ಆನ್‍ಲೈನ್ ಬುಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆ ಕುರಿತು ಪರಿಶೀಲನೆ ನಡೆಸುವುದಾಗಿ ಹೇಳಿದ್ದೆ ಅಷ್ಟೇ. ಖಾಸಗಿ ವಾಹನಗಳ ಹಿತಾಸಕ್ತಿಯೂ ನಮಗೆ ಮುಖ್ಯ. ಹಾಗಾಂತ ಅದಕ್ಕಾಗಿ ನಮ್ಮ ಸಂಸ್ಥೆಯ ಹಿತ ಬಲಿಕೊಡುವುದಿಲ್ಲ ಎಂದು ರೇವಣ್ಣ ಸ್ಪಷ್ಟಪಡಿಸಿದರು. ನಾಳೆ ಬಸ್ ದಿನಾಚರಣೆಯ ಅಂಗವಾಗಿ ಸ್ವತಃ ನಾನೇ ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬಸ್‍ನಲ್ಲಿ ಪ್ರಯಾಣಿಸುತ್ತೇನೆ ಎಂದು ತಿಳಿಸಿದರು. ಕೆಎಸ್‍ಆರ್‍ಟಿಸಿ ಅಧ್ಯಕ್ಷ ಗೋಪಾಲ ಪೂಜಾರಿ, ಶಾಸಕ ಎನ್.ಎ.ಹ್ಯಾರೀಸ್, ಬಿಬಿಎಂಪಿ ಸದಸ್ಯೆ ಸೌಮ್ಯ ಶಿವಕುಮಾರ್ ಮತ್ತಿತರರು ಇದ್ದರು.

Facebook Comments

Sri Raghav

Admin