ಅಪಘಾತ ತಪ್ಪಿಸಲು ಹೋಗಿ ಕಾಲು ಮುರಿದುಕೊಂಡ ಲಾರಿ ಚಾಲಕ

ಈ ಸುದ್ದಿಯನ್ನು ಶೇರ್ ಮಾಡಿ

lorry

ಚನ್ನಪಟ್ಟಣ, ಅ.22- ಎದುರುಗಡೆಯ ವಾಹನ ಹಿಂದಿಕ್ಕಲು ಹೋದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಪಕ್ಕದ ರಸ್ತೆಗೆ ನುಗ್ಗಿದ ಪರಿಣಾಮ ಆ ರಸ್ತೆಯಲ್ಲಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿಪಲ್ಟಿ ಹೊಡೆದು ಲಾರಿ ಚಾಲಕನ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಪ್ರಸಿದ್ಧ ಕೆಂಗಲ್ ಬಳಿಯ ಶ್ರೀ ಶನಿದೇವರ ದೇವಾಲಯದ ಬಳಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಶುಕ್ರವಾರ ಮಧ್ಯಾಹ್ನ 3ರ ಸುಮಾರಿನಲ್ಲಿ ಈ ಘಟನೆ ನಡೆದಿದೆ.ಲಾರಿ ಪಲ್ಟಿಯಿಂದ ಕಾಲು ಮುರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಸರ್ಧಾರ್ ಎಂದು ತಿಳಿದು ಬಂದಿದ್ದು ಬೆಂಗಳೂರು ಕಡೆಯಿಂದ ಮೈಸೂರು ಕಡೆಗೆ ಕಲ್ಲಿದ್ದಲು ತುಂಬಿಕೊಂಡು ಸಾಗುವಾಗ ಈ ಘಟನೆ ನಡೆದಿದೆ.

ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ಕೆಂಗಲ್‍ಬಳಿ ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರನ್ನು ಹಿಂದಿಕ್ಕುವ ಬರದಲ್ಲಿ ಅತಿವೇಗದಲ್ಲಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಕ್ಷಣಾರ್ಧದಲ್ಲಿ ಹೆದ್ದಾರಿಯ ಡಿವೈಡರ್‍ದಾಟಿ ಪಕ್ಕದ ರಸ್ತೆಗೆ ಇಳಿದಿದೆ.ಇದ್ಯಾವುದರ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ಚಾಲನೆ ಮಾಡಿಕೊಂಡು ವೇಗದಲ್ಲಿ ಬರುತ್ತಿದ್ದ ಲಾರಿ ಚಾಲಕ ತಕ್ಷಣ ಎದುರಾದ ಕಾರಿಗೆ ಲಾರಿ ಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಹೊಡೆದೆ.ತೀವ್ರವಾಗಿ ಜಖಂಗೊಂಡಿರುವ ಲಾರಿಯಿಂದ ಚಾಲಕನ ಪ್ರಾಣ ರಕ್ಷಣೆ ಮಾಡಿ ಆತನನ್ನು ತಕ್ಷಣ ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಕಾಲು ಮುರಿದಿರುವ ಆತನಿಗೆ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ನಿಮಾನ್ಸ್‍ಗೆ ದಾಖಲಿಸಲಾಗಿದೆ.ಈ ಪ್ರಕರಣದ ಬಗ್ಗೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು ಸಂಚಾರಿ ಪೊಲೀಸ್ ಠಾಣೆಯ ಪಿಎಸ್‍ಐ ವಸಂತ್‍ಕುಮಾರ್ ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

 

Facebook Comments

Sri Raghav

Admin