ಅಪಹರಣಕಾರರಿಂದ ಬಚಾವಾಗಿ ಬಂದ ಬಲು ಚಾಲಾಕಿ ಬಾಲಕ

ಈ ಸುದ್ದಿಯನ್ನು ಶೇರ್ ಮಾಡಿ

kidnap

ಹುಬ್ಬಳ್ಳಿ, ಆ.31- ಅಪಹರಣಕ್ಕೊಳಗಾಗಿದ್ದ ಬಾಲಕನೊಬ್ಬ ತನ್ನ ಸಮಯ ಪ್ರಜ್ಞೆಯಿಂದ ಬಚಾವಾಗಿರುವ ಘಟನೆ ನಗರದಲ್ಲಿ ನಡೆದಿದೆ. ಮೂಲತಃ ದಾವಣಗೆರೆಯ ನಿವಾಸಿ ಆಕಾಶ್ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದಿರುವ ಬಾಲಕನಾಗಿದ್ದಾನೆ.

ಘಟನೆಯ ವಿವರ: ಕಳೆದ ಎರಡು ದಿನಗಳ ಹಿಂದೆಯೇ ಜ್ವರ ಬಂದ ಹಿನ್ನೆಲೆಯಲ್ಲಿ ತನ್ನ ಅಜ್ಜಿಯ ಜತೆ ದಾವಣಗೆರೆಯ  ಖಾಸಗಿ ಆಸ್ಪತ್ರೆಗೆ ತನ್ನ ಸಂಬಂಧಿಯನ್ನು ನೋಡಲು ಬಂದಿದ್ದಾಗ ದುಷ್ಕರ್ಮಿಗಳು ಈತನಿಗೆ ಮತ್ತು ಬರಿಸಿ ಅಪಹರಿಸಿದ್ದರು. ಮೊಮ್ಮಗ ಕಾಣದಿದ್ದಾಗ ಅಜ್ಜಿ ಆತಂಕಗೊಂಡು ನಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದಾವಣಗೆರೆಯಿಂದ ಕ್ರೂಸರ್ ವಾಹನದಲ್ಲಿ ಬಾಲಕನನ್ನು ಹುಬ್ಬಳ್ಳಿಗೆ ಕರೆ ತಂದಿದ್ದರು. ಆತ ಎಚ್ಚೆತ್ತುಕೊಂಡಾಗ ತಾನು ದುಷ್ಕರ್ಮಿಗಳ ಕೈಗೆ ಸಿಕ್ಕಿ ಬಿದ್ದಿರುವುದು ಗೊತ್ತಾಗಿದೆ.

ರಸ್ತೆ ಬದಿ ವಾಹನ ನಿಲ್ಲಿಸಿ ದುಷ್ಕರ್ಮಿಗಳು ಹೊಟೇಲ್ಗೆ ಹೋಗಿ ತಿಂಡಿ ತಿನ್ನುತ್ತಿದ್ದರು. ಇದನ್ನು ಗಮನಿಸಿ ನಿಧಾನವಾಗಿ ಅಲ್ಲಿಂದ ತಪ್ಪಿಸಿಕೊಂಡು ಸ್ಥಳೀಯರ ಸಹಾಯದಿಂದ ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿಂದ ದಾವಣಗೆರೆಗೆ ರೈಲು ಹತ್ತಿದ್ದಾನೆ.  ಟಿಕೆಟ್ ಇಲ್ಲದ ಕಾರಣ ರೈಲ್ವೆ ಅಧಿಕಾರಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆತನನ್ನು ದುಷ್ಕರ್ಮಿಗಳು ಅಪಹರಿಸಿದ ವಿಷಯ ಗೊತ್ತಾಗಿದೆ. ನಂತರ ಪೋಷಕರಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿ ಅವರನ್ನು ಕರೆಸಿಕೊಂಡು ಬಾಲಕನನ್ನು ಅವರಿಗೆ ನೀಡಲಾಗಿದೆ. ಬಾಲಕನ ವಿಚಾರಣೆ ನಡೆಸಿದಾಗ ನನ್ನ ಜತೆ ಇನ್ನು 6 ಮಂದಿ ಬಾಲಕರು ಇದ್ದರು ಎಂದು ಹೇಳಿದ್ದಾರೆ.

ರಾಜ್ಯದ ವಿವಿಧೆಡೆಗಳಿಂದ ಮಕ್ಕಳನ್ನು ಅಪಹರಿಸಿ ಅವರು ತೊಟ್ಟಿದ್ದ ಬಟ್ಟೆಯನ್ನು ಬದಲಾಯಿಸಿ ಅವರು ಗುರುತು ಪತ್ತೆಯಾಗದಂತೆ ಮಾಡಿದ್ದರು ಎಂದು ಬಾಲಕ ಆಕಾಶ್ ಹೇಳಿಕೊಂಡಿದ್ದಾನೆ.
ಈತ ದಾವಣಗೆರೆಯಲ್ಲಿ ಮಾಡ್ರನ್ ಹೈಸ್ಕೂಲ್ನಲ್ಲಿ 5ನೆ ತರಗತಿ ಓದುತ್ತಿದ್ದು, ಈತನ ಮಾಹಿತಿ ಆದರಿಸಿ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಿದ್ದಾರೆ.  ಈ ರೀತಿ ಮಕ್ಕಳನ್ನು ಅಪಹರಿಸಿ ನಂತರ ಅವರನ್ನು ಮಾರಾಟ ಮಾಡುವ ದೊಡ್ಡ ಜಾಲವೇ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin