ಅಪಹರಣ ಪ್ರಕರಣ ಭೇದಿಸಿದ ಪೊಲೀಸರು : ಮೂವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrest

ಚನ್ನಪಟ್ಟಣ, ಅ.22- ಸಿನೀಮಿಯ ರೀತಿಯಲ್ಲಿ ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯೋರ್ವನನ್ನು ಅಕ್ಕೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಪ್ರಕರಣ ನಡೆದಿದೆ.ಅಪಹರಣಕ್ಕೊಳಗಾಗಿದ್ದ ವ್ಯಕ್ತಿಯನ್ನು ಪತ್ತೆ ಮಾಡಿ ಮೂರು ಮಂದಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಮಾರುತಿ ಓಮ್ನಿಯನ್ನು ವಶಕ್ಕೆ ಪಡೆದಿದ್ದಾರೆ.ತಾಲ್ಲೂಕಿನ ಸಿಂಗರಾಜಿಪುರ ಗ್ರಾಮದ ಲೇಟ್ ಚಿಕ್ಕಪುಟ್ಟೇಗೌಡ ಎಂಬುವರ ಮಗ ಚೌಡೇಗೌಡ (40) ಅಪಹರಣಕ್ಕೊಳಗಾಗಿದ್ದ ವ್ಯಕ್ತಿ.ಈತನನ್ನು ಬೆಂಗಳೂರಿನ ಲಗ್ಗೆರೆ ನಿವಾಸಿಗಳಾದ ಕುಮಾರ್, ಮಂಜುನಾಥ್, ಅರಸೇಗೌಡ ಈ ಮೂವರು ಅ.17ರಂದು ಮಾರುತಿ ವ್ಯಾನ್‍ನಲ್ಲಿ ಅಪಹರಿಸಿದ್ದರು.

ಈ ಪ್ರಕರಣದ ಬಗ್ಗೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ಪ್ರಕರಣದ ತನಿಖೆಹೊತ್ತ ಠಾಣೆಯ ಪಿಎಸ್‍ಐ ಸದಾನಂದ ಹಾಗೂ ಸಿಬ್ಬಂದಿ ಸಮಗ್ರ ಮಾಹಿತಿಯನ್ನು ಕಲೆಹಾಕಿ ನಡೆಸಿದ ಕಾರ್ಯಾಚರಣೆಯಿಂದ ಆರೋಪಿಗಳನ್ನು ಬಂಧಿಸಲಾಗಿದೆ.ಆರೋಪಿಗಳಲ್ಲಿ ಒಬ್ಬನಾದ ಕುಮಾರ್ ಆತನ ಲಗ್ಗೆರೆ ಮನೆಯಲ್ಲಿ ಚೌಡೇಗೌಡನನ್ನು ಗೃಹ ಬಂಧನದಲ್ಲಿರಿಸಿದ್ದ ಬಗ್ಗೆ ತಿಳಿದ ಪೊಲೀಸರು ಚೌಡೇಗೌಡನನ್ನು ರಕ್ಷಣೆ ಮಾಡಿ ಪೊಷಕರಿಗೆ ಒಪ್ಪಿಸಿದ್ದಾರೆ.

ಘಟನೆ ಹಿನ್ನೆಲೆ:

ಅಪಹರಣಕ್ಕೊಳಗಾಗಿದ್ದ ಚೌಡೇಗೌಡ ಸಿಂಗರಾಜಿಪುರ ಗ್ರಾಮ ತೊರೆದು 15 ವರ್ಷದ ಹಿಂದೆ ಬೆಂಗಳೂರಿನಲ್ಲಿ ನೆಲಸಿ ಪಾನಿಪೂರಿ ವ್ಯಾಪಾರ ಮಾಡಿಕೊಂಡಿದ್ದನು. ವ್ಯಾಪಾರದಲ್ಲಿ ನಷ್ಟವಾಗಿ ಕುಮಾರ, ಮಂಜುನಾಥ್, ಅರಸೇಗೌಡ ಈ ಮೂವರ ಬಳಿ 15 ಲಕ್ಷಕ್ಕೂ ಹೆಚ್ಚು ಸಾಲಮಾಡಿ ಅದನ್ನು ತೀರಿಸಲಾಗದೆ ಕೆಲ ತಿಂಗಳ ಹಿಂದೆ ಗ್ರಾಮಕ್ಕೆ ಹಿಂದಿರುಗಿದ್ದನು.ಈ ಹಿನ್ನೆಲೆಯಲ್ಲಿ ಈತನನ್ನು ಅಪಹರಿಸಿ ಕುಮಾರ್ ಮನೆಯಲ್ಲಿ ಇಟ್ಟು ಚೌಡೇಗೌಡನಿಗೆ ಬೆದರಿಕೆ ಹಾಕಿ ತಾನು ನೀಡಿರುವ 1,75,000 ಹಣಕ್ಕೆ ಬದಲಾಗಿ ಲಗ್ಗೆರೆಯಲ್ಲಿರುವ ಅವನ ನಿವೇಶನವನ್ನು ಬರೆದುಕೊಡುವಂತೆ ಬಲವಂತ ಮಾಡುತ್ತಿದ್ದ. ಆ ವೇಳೆಗೆ ಪ್ರಕರಣದ ತನಿಖೆ ನಡೆಸಿದ ಅಕ್ಕೂರು ಪೊಲೀಸರು ದಾಳಿ ಮಾಡಿ ಪ್ರಕರಣ ಭೇದಿಸಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin