ಅಪಾಯಕಾರಿ ದೇಶಗಳ ಪ್ರವಾಸಕ್ಕೆ ನಿರ್ಬಂಧ ಹೇರಲು ಟ್ರಂಪ್ ಚಿಂತನೆ

ಈ ಸುದ್ದಿಯನ್ನು ಶೇರ್ ಮಾಡಿ

Trump-America

ವಾಷಿಂಗ್ಟನ್, ಜೂ.6-ಇಂಗ್ಲೆಂಡ್ ಸೇರಿದಂತೆ ಐರೋಪ್ಯ ದೇಶಗಳಲ್ಲಿ ಭಯೋತ್ಪಾದಕರ ದಾಳಿಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಕೆಲವೊಂದು ಅಪಾಯಕಾರಿ ದೇಶಗಳಿಂದ ಅಮೆರಿಕನ್ನರನ್ನು ರಕ್ಷಿಸಲು ಪ್ರವಾಸ ನಿರ್ಬಂಧ ಹೇರಬೇಕೆಂಬ ತಮ್ಮ ಹಿಂದಿನ ಚಿಂತನೆಗೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮರುಜೀವ ನೀಡಿದ್ದಾರೆ.   ಕಳೆದ ರಾತ್ರಿ ಟ್ವೀಟರ್‍ನಲ್ಲಿ ತಮ್ಮ 31.6 ದಶಲಕ್ಷ ಅನುಯಾಯಿಗಳೊಂದಿಗೆ ತಮ್ಮ ನಿಲುವನ್ನು ಟ್ರಂಪ್ ವ್ಯಕ್ತಪಡಿದ್ದಾರೆ.ಕೆಲವೊಂದು ಅಪಾಯಕಾರಿ ದೇಶಗಳಿಗೆ ಸಂಚಾರ/ಪ್ರವಾಸ ನಿರ್ಬಂಧವನ್ನು ವಿಧಿಸಬೇಕೆಂಬುದು ಸರಿ. ನಮ್ಮ ಜನರನ್ನು ರಕ್ಷಿಸಲು ಇದಕ್ಕಿಂತ ಸರಿಯಾದ ಮಾರ್ಗ ಬೇರೊಂದಿಲ್ಲ ಎಂದು ಅವರು ತಿಳಿಸಿದ್ದಾರೆ. ಆದರೆ ತಾವು ಅಪಾಯಕಾರಿ ಎಂದು ಪರಿಗಣಿಸುವ ದೇಶಗಳ ಹೆಸರುಗಳನ್ನು ಅವರು ತಿಳಿಸಿಲ್ಲ. ಲಂಡನ್‍ನಲ್ಲಿ ಕಳೆದ ವಾರ ಐಎಸ್ ಉಗ್ರಗಾಮಿಗಳಿಂದ ನಡೆದ ಭಯೋತ್ಪಾದಕರ ದಾಳಿ ಹಿನ್ನೆಲೆಯಲ್ಲಿ ಟ್ರಂಪ್‍ರ ಈ ಚಿಂತನೆ ಮಹತ್ವ ಪಡೆದುಕೊಂಡಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin