ಅಪಾರ್ಟ್ ಮೆಂಟ್ ಗೆ ನುಗ್ಗಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Arrest

ಬೆಂಗಳೂರು, ಆ.23- ಅಪಾರ್ಟ್ಮೆಂಟ್ವೊಂದರ ಕಿಟಕಿ ಮೂಲಕ ಮನೆಯೊಳಗೆ ನುಗ್ಗಿ ಮಲಗಿದ್ದ ಮಹಿಳೆಯ ಕೈ ಎಳೆದು ಅಸಭ್ಯವಾಗಿ ವರ್ತಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಾಮುಕ ಹಾಗೂ ಈತನಿಗೆ ಸಹಾಯ ಮಾಡಿದ್ದ ಭದ್ರತಾ ಸಿಬ್ಬಂದಿಯನ್ನು ಎಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ.  ಕಾಮುಕ ಆರೋಪಿ ಪ್ರಶಾಂತ್ ಜಿತ್ (24) ಮತ್ತು ಭದ್ರತಾ ಸಿಬ್ಬಂದಿ ಮಿಥುನ್ ನಾಯಕ (27) ಬಂಧಿತರು.  ಘಟನೆ ವಿವರ: ಎಚ್ಎಸ್ಆರ್ ಲೇಔಟ್ ಸರಹದ್ದಿನಲ್ಲಿ ಪ್ರತಿಷ್ಠಿತ ಅಪಾರ್ಟ್ಮೆಂಟ್ ಇದ್ದು, ಆ.17ರಂದು ಮಧ್ಯರಾತ್ರಿ 1.30ರಲ್ಲಿ ಇಲ್ಲಿನ ಭದ್ರತಾ ಸಿಬ್ಬಂದಿ ಮಿಥುನ್ ಎಂಬಾತನ ಸಹಾಯದಿಂದ ಕಾಮುಕ ಪ್ರಶಾಂತ್ ಜಿತ್ ಅಪಾರ್ಟ್ಮೆಂಟ್ನ ಕಿಟಕಿ ಮೂಲಕ ಮನೆಯೊಳಗೆ ನುಗ್ಗಿದ್ದಾನೆ.  ಇಬ್ಬರು ಮಕ್ಕಳ ಜತೆ ಮಹಿಳೆ ಮಲಗಿದ್ದಾಗ ಆಕೆ ಕೈ ಎಳೆದು ಅಸಭ್ಯವಾಗಿ ವರ್ತಿಸಿದಾಗ ಎಚ್ಚರವಾಗಿದೆ.

ತಕ್ಷಣ ಆ ಮಹಿಳೆ ಸಹಾಯಕ್ಕಾಗಿ ಕೂಗಿಕೊಂಡಾಗ ನೆರೆಹೊರೆಯವರು ಎಚ್ಚರಗೊಂಡಿದ್ದಾರೆ. ಇದರಿಂದ ಹೆದರಿದ ಕಾಮುಕ ಕಿಟಕಿ ಮೂಲಕವೇ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.  ಈತನನ್ನು ತೀವ್ರ ವಿಚಾರಣೆ ನಡೆಸಿದಾಗ, ಅಪಾರ್ಟ್ಮೆಂಟ್ ಒಳಗೆ ಹೋಗಲು ಇಲ್ಲಿನ ಭದ್ರತಾ ಸಿಬ್ಬಂದಿ ಸಹಾಯ ಮಾಡಿದನೆಂದು ಕಾಮುಕ ಬಾಯಿಬಿಟ್ಟಾಗ ಪೊಲೀಸರು ಆತನನ್ನೂ ಬಂಧಿಸಿದ್ದಾರೆ.  ಮಹಿಳೆ ಪತಿ ಕಾರ್ಯನಿಮಿತ್ತ ಮುಂಬೈಗೆ ತೆರಳಿದ್ದರು. ಎಚ್ಎಸ್ಆರ್ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಈ ಇಬ್ಬರನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin