ಅಪೌಷ್ಟಿಕತೆಯಿಂದ 600 ಮಕ್ಕಳು ಸತ್ತಿದ್ದಕ್ಕೆನಾನೇನು ಮಾಡಲಿ ಎಂದ ‘ಮಹಾ’ಮಂತ್ರಿ

ಈ ಸುದ್ದಿಯನ್ನು ಶೇರ್ ಮಾಡಿ

Devendra-01

ಮುಂಬೈ, ಸೆ. 17- ಅಪೌಷ್ಟಿಕತೆಯಿಂದ ಬುಡಕಟ್ಟು ಸಮುದಾಯದ 600 ಮಕ್ಕಳು ಸಾವಿಗೀಡಿದ್ದಾರೆ ಎಂಬ ಸಂಗತಿಯನ್ನು ಗಮನಕ್ಕೆ ತಂದ ಜನರಿಗೆ ಅದಕ್ಕೆ ನಾನೇನು ಮಾಡಲಿ ಎಂದು ಮಹಾರಾಷ್ಟ್ರ ಬುಡಕಟ್ಟು ಅಭಿವೃದ್ದಿ ಸಚಿವ ವಿಷ್ಣು ಸವರ ಬೇಜವಾಬ್ದಾರಿ ಉತ್ತರ ನೀಡಿ ಈಗ ಭಾರೀ ಬಿಕ್ಕಟ್ಟಿಗೆ ಸಿಲುಕಿದ್ದಾರೆ.   ಬುಡಕಟ್ಟು ಕೋಮಿನ ಬಡಮಕ್ಕಳ ಜೀವದ ಬಗ್ಗೆ ಅತ್ಯಂತ ತಾತ್ಸಾರದ ಹೇಳಿಕೆ ನೀಡಿರುವ ಸಚಿವರನ್ನು ವಜಾಗೊಳಿಸಬೇಕೆಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಮೇಲೆ ಭಾರೀ ಒತ್ತಡ ಹಾಕಲಾಗುತ್ತಿದೆ.  ವಿಷ್ಣು ಸವರ ಗುರವಾರ ಪಲ್‍ಘರ್ ಜಿಲ್ಲೆ ಕಲಂಬವಾಡಿ ಗ್ರಾಮಕ್ಕೆ ಭೇಟಿ ನೀಡಿದ್ದರು. ಈ ಪ್ರದೇಶದಲ್ಲಿ ಇತ್ತೀಚೆಗೆ ಅಪೌಷ್ಟಿಕತೆ ಮತ್ತು ಹಸಿವೆಯಿಂದ 600 ಮಕ್ಕಳು ಸಾವಿಗೀಡಾಗಿದ್ದಾರೆ ಎಂದು ಅಲ್ಲಿನ ಬುಡಕಟ್ಟು ಮಂದಿ ಸಚಿವರ ಗಮನಕ್ಕೆ ತಂದಾಗ, ಅದಕ್ಕೆ ನಾನೇನು ಮಾಡಲಿ ಎಂದು ಉದ್ದಟತನದ ಹೇಳಿಕೆ ನೀಡಿದ್ದರು.

ಇದರಿಂದ ಕುಪಿತರಾದ ಸ್ಥಳೀಯ ಬುಡಕಟ್ಟು ಜನರ ಸಚಿವರಿಗೆ ಛೀಮಾರಿ ಹಾಕಿ ಅಲ್ಲಿಂದ ತೊಲಗಿ ಹೋಗುವಂತೆ ತಿಳಿಸಿದ್ದರು.   ಬುಡಕಟ್ಟು ಜನರ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಸಚಿವರ ಈ ಹೇಳಿಕೆ ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin