ಅಪ್ಪನಾದ ಶಾಹಿದ್ ಕಪೂರ್‌

ಈ ಸುದ್ದಿಯನ್ನು ಶೇರ್ ಮಾಡಿ

shahid

ಮುಂಬೈ ಆ.27 : ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಹೆಣ್ಣು ಮಗುವಿಗೆ ಅಪ್ಪ ಆಗಿದ್ದಾರೆ. ಕಾತುರದಿಂದ ಕಾಯುತ್ತಿದ್ದ ಅತಿಥಿ ಮನೆಗೆ ಬಂದಾಗಿದೆ. ಮೀರಾ ರಜ್‌ಪೂತ್‌ ದಂಪತಿಗಳಿಗೆ ಹೆಣ್ಣು ಮಗು ಜನಿಸಿದೆ. ಶುಕ್ರವಾರ ನಗರದ ಖಾರ್‌ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಮೀರಾ. ಶಾಹಿದ್‌ ಕಳೆದ ವರ್ಷ ದೆಹಲಿ ಮೂಲದ ಮೀರಾರನ್ನು ವಿವಾಹವಾಗಿದ್ದರು. ಹೆಣ್ಣು ಮಗುವಿನ ಜನನದಿಂದ ಇಡೀ ಪರಿವಾರ ಖುಷಿಯಲ್ಲಿದೆ. ಮೊದಲ ಬಾರಿಗೆ ತಂದೆಯಾಗುತ್ತಿರುವ ಆನಂದವನ್ನು ಆಸ್ವಾದಿಸುತ್ತಿದ್ದಾರೆ ಶಾಹಿದ್‌.  ಟ್ವಿಟ್ಟರ್‌ನಲ್ಲಿ ಶಾಹಿದ್‌-ಮೀರಾರಿಗೆ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ. ರಿತೇಶ್‌ ದೇಶ್‌ಮುಖ್‌-ಜೆನಿಲಿಯಾ, ಕರಣ್‌ ಜೋಹಾರ್‌ ಇನ್ನಿತರ ಸೆಲೆಬ್ರಿಟಿಗಳು ಶಾಹಿದ್‌ಗೆ ಏಂಜಲ್‌ ಜನಿಸಿರುವುದಕ್ಕೆ ಶುಭಾಶಯ ತಿಳಿಸಿದ್ದಾರೆ. ಶಾಹಿದ್‌ ಎಲ್ಲರ ಶುಭಾಶಯಗಳಿಗೆ ಟ್ವಿಟ್ಟರ್‌ ಮೂಲಕ ಕೃತಜ್ಞತೆ ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin