ಅಪ್ಪನ ಸೇವೆ ಮಾಡುವುದೇ ನನ್ನ ಕರ್ತ್ಯವ್ಯ ಎಂದ ನಿಖಿಲ್

ಈ ಸುದ್ದಿಯನ್ನು ಶೇರ್ ಮಾಡಿ

Nilhil--01

ಬೆಂಗಳೂರು, ಅ.15- ನಮ್ಮ ಕಣ್ಣ ಮುಂದೆ ಇರುವ ತಂದೆ-ತಾಯಿಯೊಂದಿಗೆ ಹೆಚ್ಚಿನ ಸಮಯ ವಿನಿಯೋಗಿಸಿ ಅವರ ಸೇವೆ ಮಾಡುವುದು ನಮ್ಮ ಆದ್ಯ ಕರ್ತವ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ಹಾಗೂ ನಟ ನಿಖಿಲ್‍ಗೌಡ ತಿಳಿಸಿದ್ದಾರೆ. ತಂದೆ-ತಾಯಿಯ ಪ್ರೀತಿ ವಾತ್ಸಲ್ಯ ಅಜರಾಮರವಾಗಿದ್ದು, ನನ್ನ ಪ್ರೀತಿಯ ಸಹೋದರ, ಸಹೋದರಿಯರು ತಮ್ಮ ಪೋಷಕರನ್ನು ಗೌರವಿಸಬೇಕೆಂದು ಕರೆ ನೀಡಿದರು.

ನಮ್ಮ ತಂದೆ ಎಚ್.ಡಿ.ಕುಮಾರಸ್ವಾಮಿ ಅವರು ನಾಡಿನ ಜನರ ಹಾರೈಕೆಯಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಇದಕ್ಕಾಗಿ ರಾಜ್ಯದ ಜನತೆಗೆ ನನ್ನ ನಮಸ್ಕಾರಗಳನ್ನು ಅರ್ಪಿಸುತ್ತೇನೆ.  ಜನರ ಪ್ರೀತಿ, ವಿಶ್ವಾಸಕ್ಕೆ ನಾನು ಮತ್ತು ನನ್ನ ತಂದೆ-ತಾಯಿ ಚಿರಋಣಿಯಾಗಿರುತ್ತೇವೆ. ಪ್ರತಿಯೊಬ್ಬರಿಗೂ ಅವರವರ ತಂದೆ-ತಾಯಿ ನಡೆದಾಡುವ ದೇವರಿದ್ದಂತೆ ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಜನ್ಮದಾತರಿಗೆ ಹೆಚ್ಚಿನ ಸಮಯ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನಗೊಳ್ಳುವ ಬದಲು ಒಂದು ಕ್ಷಣ ಯೋಚಿಸಬೇಕು.

ನಮಗೆ ಸಮಯ ಇಲ್ಲದಿರಬಹುದು. ಆದರೆ, ಎಷ್ಟೋ ಮಂದಿಗೆ ಪೋಷಕರೇ ಇರುವುದಿಲ್ಲ. ಇಂದು ನಮ್ಮನ್ನು ಈ ಮಟ್ಟಕ್ಕೆ ಸ್ವಾವಲಂಬಿಗಳನ್ನಾಗಿಸಿ ನಮಗೊಂದು ಬದುಕು ರೂಪಿಸಿಕೊಟ್ಟಿರುವ ತಂದೆ-ತಾಯಿ ನಮ್ಮನ್ನು ಬೆಳೆಸುವಾಗ ನಮ್ಮಿಂದ ಯಾವುದೇ ಫಲಾಪೇಕ್ಷೆಯನ್ನು ಇಟ್ಟುಕೊಂಡಿರುವುದಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಮರೆಯಬಾರದು ಎಂದು ಹೇಳಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin