ಅಪ್ರಾಪ್ತೆಯನ್ನು ಮದುವೆಯಾಗಲು ಯತ್ನಿಸುತ್ತಿದ್ದ ಅರಣ್ಯ ಅರಣ್ಯಾಧಿಕಾರಿ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

 

minor-marrige
ಕುಣಿಗಲ್, ಡಿ.31- ಅಪ್ರಾಪ್ತೆಯನ್ನು ಮದುವೆಯಾಗಲು ಯತ್ನಿಸುತ್ತಿದ್ದ ಅರಣ್ಯ ಅಕಾರಿಯೊಬ್ಬನನ್ನು ಪೆÇಲೀಸರು ಬಂಸಿರುವ ಘಟನೆ ಹುಲಿಯೂರು ದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅರಣ್ಯ ವಲಯದ ಉಪವಿಭಾ ಗಾಕಾರಿ ಸುರೇಶ್ (58) ಬಂತ ಆರೋಪಿ.  ಸುರೇಶ್ ಮನೆಗೆ ಕೆಲಸಕ್ಕೆ ಬರುತ್ತಿದ್ದ ಬಾಲಕಿಯ ತಾಯಿ ನಿಂಗಮ್ಮನನ್ನು ಅವರ ಮಗಳನ್ನು ಮದುವೆ ಮಾಡಿಕೊಡುವಂತೆ ಒತ್ತಾಯಿಸಿದ್ದ. ಇದಕ್ಕೆ ನಿಂಗಮ್ಮ ಕೂಡ ಸಮ್ಮತಿಸಿದ್ದು, ಮದುವೆ ಮಾಡಿಕೊಡುವುದಾಗಿ ಹೇಳಿದ್ದರು.  ಈಕೆಯ ಮಗಳು ತಾಲೂಕಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ತಾಯಿಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಆದರೆ, ಸುರೇಶ್ ಬಲವಂತವಾಗಿ ಅಪ್ತಾಪ್ತೆಯನ್ನು ಮದುವೆಯಾಗಲು ಪ್ರಯತ್ನಿಸುತ್ತಿದ್ದು, ಇದಕ್ಕೆ ಬೇಸತ್ತ ಆಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಬೆಂಗಳೂರಿನ ಸಂಬಂಕರ ಮನೆಯಲ್ಲಿ ವಾಸವಿದ್ದಳು.

ಇಷ್ಟಕ್ಕೇ ಸುಮ್ಮನಾಗದ ಸುರೇಶ್ ನಿಂಗಮ್ಮನ ಸಹಕಾರದಿಂದ ಮತ್ತೆ ಮದುವೆಯಾಗಲು ಪ್ರಯತ್ನಿಸುತ್ತಿದ್ದು, ಇದರಿಂದ ಕುಪಿತಗೊಂಡ ಅಪ್ರಾಪ್ತೆ ಈ ಬಗ್ಗೆ ಹುಲಿಯೂರುದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ದೂರು ದಾಖಲಿಸಿಕೊಂಡ ಪಿಎಸ್‍ಐ ಅನಿಲ್‍ಕುಮಾರ್ ನೇತೃತ್ವದ ತಂಡ ಆರೋಪಿ ಸುರೇಶ್‍ನನ್ನು ಬಂಸುವಲ್ಲಿ ಯಶಸ್ವಿಯಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin