ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಇಬ್ಬರು ಶಿಕ್ಷಕರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Bopy

ಕಲಬುರ್ಗಿ, ಆ.25- ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿರುವ ಘಟನೆ ಕಲಬುರ್ಗಿ ಜಿಲ್ಲೆ ಬಿಜಾಪುರ ತಾಲ್ಲೂಕಿನಲ್ಲಿ ನಡೆದಿದೆ. ಖಾಸಗಿ ಶಾಲೆ ದೈಹಿಕ ಶಿಕ್ಷಕನಾಗಿರುವ ಶರಣಯ್ಯಶಹಾಪುರ ಮತ್ತು ಅದೇ ಶಾಲೆಯ ಮತ್ತೊಬ್ಬ ಶಿಕ್ಷಕ ಯೋಗೇಶ್ ಪತ್ತಾರ್ ಎಂಬ ಶಿಕ್ಷಕರಿಬ್ಬರು ಅದೇ ಶಾಲೆಯ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ.  ಈ ಘಟನೆಯ ಬಗ್ಗೆ ಬಾಲಕ ದೂರು ನೀಡಲು ಮುಂದಾದಾಗ ಘಟನೆ ಕುರಿತಂತೆ ಬ್ಲ್ಯಾಕ್ಮೇಲ್ ಮಾಡಿ ಅವನನ್ನು ಹೆದರಿಸಲು ನೋಡಿದ್ದಾರೆ. ಆದರೆ ಬಾಲಕ ಹಾಗೂ ಅವನ ಪೋಷಕರು ಧೈರ್ಯ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕನ ದೂರಿನ ಹಿನ್ನೆಲೆಯಲ್ಲಿ ಇಬ್ಬರು ಶಿಕ್ಷಕರನ್ನು ಪೊಲೀಸರು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದಾಗ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

► Follow us on –  Facebook / Twitter  / Google+

 

Facebook Comments

Sri Raghav

Admin