ಅಪ್ರಾಪ್ತ ಬಾಲಕಿಗೆ ಮದ್ಯ ಕುಡಿಸಿ ಪ್ರಿಯಕರನಿಂದ ರೇಪ್ ಮಾಡಿಸಿದ ಅತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Rape-Hands--01 ನವದೆಹಲಿ, ಏ.25-ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸುವ ಕಾನೂನು ಕಾರ್ಯರೂಪಕ್ಕೆ ಬಂದಿದ್ದರೂ, ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಮುಂದುವರಿದೆ. ಅತ್ಯಾಚಾರಗಳ ರಾಜಧಾನಿ ಎಂದೇ ಕುಖ್ಯಾತಿ ಪಡೆದಿರುವ ದೆಹಲಿಯಲ್ಲಿ 13ರ ಬಾಲಕಿಯೊಬ್ಬಳಿಗೆ ಆಕೆಯ ಅತ್ತೆ ಬಲವಂತವಾಗಿ ಮದ್ಯ ಕುಡಿಸಿ ತನ್ನ ಪ್ರಿಯತಮನಿಂದಲೇ ರೇಪ್ ಮಾಡಿಸಿರುವ ನೀಚ ಘಟನೆ ನಡೆದಿದೆ. ನವದೆಹಲಿ ಹೊರವಲಯದ ಶಹಬಾದ್ ಡೈರಿ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಬಾಲಕಿಯ ಸಹೋದರ ಅತ್ತೆ 30 ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ನಾಪತ್ತೆಯಾಗಿರುವ ಅತ್ಯಾಚಾರಿ ಮುಕೇಖ್ ಕುಮಾರ್‍ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಲೈಂಗಿಕ ದಾಳಿಯಿಂದ ರಕ್ತಸ್ರಾವವಾದ ಬಾಲಕಿಯನ್ನು ಮಹಿಳೆ ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿಯಾಗಿದ್ದಳು. ತನ್ನ ಮನೆಗೆ ಬಂದ ಬಾಲಕಿ ಕೃತ್ಯದ ಬಗ್ಗೆ ತಿಳಿಸಿದಳು. ಆಕೆಯನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಿರುವ ವೈದ್ಯರು ಅತ್ಯಾಚಾರ ನಡೆದಿರುವುದನ್ನು ದೃಢಪಡಿಸಿದ್ದಾರೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ.

ದೇಶದ ವಿವಿಧೆಡೆ ಬಾಲಕಿಯರ ಮೇಲೆ ನಿರಂತರ ಅತ್ಯಾಚಾರ ಪ್ರಕರಣಗಳು ನಡೆಯುತ್ತಲೇ ಇವೆ. ಕತುವಾ ಮತ್ತು ಉನ್ನಾವೋ ಗ್ಯಾಂಗ್ ರೇಪ್ ಪ್ರಕರಣದ ನಂತರ ದೇಶಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ 12 ವರ್ಷಗಳ ಕೆಳಗಿನ ಮಕ್ಕಳ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆ ಯನ್ನು ಕೇಂದ್ರ ಸರ್ಕಾರ ಕಾರ್ಯರೂಪಕ್ಕೆ ತಂದಿದೆ. ಆದರೂ ಇಂಥ ಪೈಶಾಚಿಕ ಕೃತ್ಯಗಳು ಮರುಕಳಿಸುತ್ತಲೇ ಇವೆ.

Facebook Comments

Sri Raghav

Admin