ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 7 ವರ್ಷ ಸಜೆ
ಚನ್ನಪಟ್ಟಣ, ಸೆ.22- ಆಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಲಯ 7 ವರ್ಷ ಸಜೆಮಏ, 60 ಸಾವಿರ ದಂಡವಿಧಿಸಿ ತೀರ್ಪು ನೀಡಿದೆ.ತಾಲ್ಲೂಕಿನ ದಶವಾರ ಗ್ರಾಮದ ಮಲ್ಲೇಶ್ (40) ಶಿಕ್ಷೆಗೆ ಒಳಗಾದ ಆರೋಪಿ.ಈತ 2015ರ ಸೆಪ್ಟಂಬರ್ 10ರಂದು ಗ್ರಾಮದಲ್ಲಿ ಮೇಕೆ ಮೇಯಿಸಿಕೊಂಡು ಬರುತ್ತಿದ್ದ ಆಪ್ರಾಪ್ತ ಬಾಲಕಿಯನ್ನು ಅಡ್ಡಗಟ್ಟಿ ಅತ್ಯಾಚಾರವೆಸಗಿ ತಲೆ ಮರೆಸಿಕೊಂಡಿದ್ದನ್ನು.ಈ ಪ್ರಕರಣ ತಾಲ್ಲೂಕಿನ ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಅಂದಿನ ಪೊಲೀಸ್ ಉಪವಿಭಾಗಾಧಿಕಾರಿ ಕೆ.ನಾರಾಯಣ್ ತನಿಖೆ ಕೈಗೊಂಡು ಆರೋಪಿ ಪತ್ತೆ ಕಾರ್ಯಕ್ಕೆ ಕೈಗೊಂಡಿದ್ದರು ಹಾಗೂ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿಸಲ್ಲಿಸಿದ್ದರು.2012-2016ರವರೆಗೆ ನ್ಯಾಯಾಲಯದಲ್ಲಿ ನಿರಂತರ ವಾದ-ವಿವಾದ ನಡೆದು ಆರೋಪಿ ಮಲ್ಲೇಶ್ ಮಾಡಿರುವ ಕೃತ್ಯ ಸಾಕ್ಷಿ ಆಧಾರಗಳ ಮುಖಾಂತರ ಸಾಬೀತಾದರಿಂದ ಆರೋಪಿಗೆ ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುಳ 7ವರ್ಷ ಸಜೆ ಹಾಗೂ 60 ಸಾವಿರ ದಂಢ ವಿಧಿಸಿ ತೀರ್ಪು ನೀಡಿದ್ದಾರೆ.
► Follow us on – Facebook / Twitter / Google+