ಅಪ್ರಾಪ್ತ ಮಕ್ಕಳ ಮದುವೆ ಅಪರಾಧ

ಈ ಸುದ್ದಿಯನ್ನು ಶೇರ್ ಮಾಡಿ

child-marriage

ಚಿತ್ರದುರ್ಗ, ಸೆ.27-ಅಪ್ರಾಪ್ತ ಮಕ್ಕಳಿಗೆ ಮದುವೆ ಮಾಡುವುದು ಶಿಕ್ಷಾರ್ಹ ಅಪರಾಧವೆಂದು ಗ್ರಾಮ ಪಂಚಾಯತ್ ಸದಸ್ಯ ಕೆ.ಎಸ್.ಜಗದೀಶ್ ತಿಳಿಸಿದರು. ಕಾಟಿಹಳ್ಳಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು,ಹೆಣ್ಣು ಮಕ್ಕಳಿಗೆ 18 ವರ್ಷ, ಗಂಡು ಮಕ್ಕಳಿಗೆ 21 ವರ್ಷ ತುಂಬಿದ ನಂತರವಷ್ಟೆ ಮದುವೆ ಮಾಡಬೇಕು ಎಂದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಮಾತನಾಡಿ, ಹೆಣ್ಣು ಮಕ್ಕಳ ಮಾನಸಿಕ, ಭೌತಿಕ ಬೆಳವಣಿಗೆಯಾಗಲು ಕನಿಷ್ಠ 18 ವರ್ಷಗಳಾದರೂ ಬೇಕು. ಇಲ್ಲವೆಂದರೆ ಗರ್ಭಕೋಶ ಸರಿಯಾಗಿ ಬೆಳವಣಿಗೆಯಾಗಿರುವುದಿಲ್ಲ ಇದರಿಂದ ತಾಯಿ ಮಗುವಿನ ಮರಣಗಳು ಹೆಚ್ಚಾಗುವ ಸಂಭವವಿದೆ ಎಂಬ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಚಲನ ಚಿತ್ರ ಪ್ರದರ್ಶನ ನಡೆಸಲಾಯಿತು. ಜಿಲ್ಲಾ ಆರೋಗ್ಯ ಮೇಲ್ವಿಚಾರಕ .ಖಾಸಿಂ ಸಾಬ್, ಶಬಾನ ಬಾನು, ಆಶಾ, ಪಿ.ಬಿ.ಬೋರಯ್ಯ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಾನಕಿ, ಕೆ.ಗುರುಶಾಂತ, ಟಿ.ನರಸಮ್ಮ, ಜಿ.ಕರಿಬಸಮ್ಮ ಆಶಾ ಕಾರ್ಯಕರ್ತೆಯರು, ಲಾವಣ್ಯ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು, 35 ಜನ ಸ್ತ್ರೀಶಕ್ತಿ ಸಂಘದ ಸದಸ್ಯರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin